ಉಳ್ಳಾಲ: ಕೆರೆ,ಕಾಲುವೆಗಳನ್ನೇ ಕಬ್ಜ ಮಾಡಿ ಬೆಂಗಳೂರಿಡೀ ನದಿ ಹರಿಯುವಂತೆ ಮಾಡಿದ ಕಂದಾಯ ಸಚಿವ ಆರ್.ಅಶೋಕ್ ಗೆ ಕಡಲ್ಕೊರೆತದ ಬಗ್ಗೆ ಏನ್ ಗೊತ್ತಿದೆ ಎಂದು ವಿದಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಲೇವಡಿ ಮಾಡಿದರು.
ಅವರಿಂದು ಸೋಮೇಶ್ವರ,ಉಚ್ಚಿಲ ಬಟ್ಟಪ್ಪಾಡಿ ಮತ್ತು ಉಳ್ಳಾಲ ಸೀ ಗ್ರೌಂಡ್ ಕಡಲ್ಕೊರೆತ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಅವಲೋಕನ ನಡೆಸಿದರು.ಕಳೆದ 60 ವರುಷಗಳಿಂದ ಕಡಲೂ ಇತ್ತು,ಕೊರೆತನೂ ಇತ್ತು,ಆವಾಗ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಏನು ಪರಿಹಾರ ನೀಡಿದ್ರು ಎಂದು ಹೇಳಿಕೆ ನೀಡಿದ್ದ ಸಚಿವ ಆರ್.ಅಶೋಕ್ ಗೆ ಟಾಂಗ್ ನೀಡಿ ಅವರು ಮಾತನಾಡಿದರು.
ಬೆಂಗಳೂರಿನ ಜಮೀನು,ಕೆರೆ ,ಕಾಲುವೆಗಳನ್ನ ಕಬ್ಜ ಮಾಡಿದ ಅಶೋಕ್ ಅವರು ಕಾಂಗ್ರೆಸು ,ಕಡಲ್ಕೊರೆತದ ಬಗ್ಗೆ ಮಾತನಾಡುವುದು ಬೇಡ.ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕಡಲ್ಕೊರೆತ ತಡೆಯಲು ಸಾಕಷ್ಟು ಕಾಮಗಾರಿ ನಡೆಸಿದೆ.ಈಗಿನ ಬಿಜೆಪಿ ಸರಕಾರಕ್ಕೆ ಅದನ್ನ ನಿರ್ವಹಣೆ ಮಾಡಲು ಪುರುಸೊತ್ತಿಲ್ಲ.ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಜನರನ್ನ ಅವರ ಪಾಡಿಗೆ ಬಿಟ್ಟರೆ ಸಮಸ್ಯೆ ಎದುರಾಗುವುದು ಸಹಜ.ಮಳೆ,ಸಮುದ್ರ ಕೊರೆತದಿಂದ ಅಪಾರ ನಷ್ಟ ಉಂಟಾಗಿದ್ದು ಸಂತ್ರಸ್ತರಿಗೆ ತಕ್ಷಣ ಪರಿಹಾರ ಒದಗಿಸುವಂತೆ ಆಗ್ರಹಿಸಿದರು.
ವಿಧಾನ ಸಭೆಯ ವಿರೋಧ ಪಕ್ಷದ ಉಪನಾಯಕರಾದ ಯು.ಟಿ.ಖಾದರ್,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಮೊದಲಾದವರು ಜೊತೆಗಿದ್ದರು.
PublicNext
19/07/2022 08:40 pm