ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಕೇವಲ ಭರವಸೆಗೆ ಸೀಮಿತವಾದ ಸಿ.ಎಂ.ಭೇಟಿ : ಸದಾಶಿವ ಉಳ್ಳಾಲ್ ಆರೋಪ

ಉಳ್ಳಾಲ: ಸೋಮೇಶ್ವರ,ಉಚ್ಚಿಲ ಬಟ್ಟಪ್ಪಾಡಿ ಪ್ರದೇಶದಲ್ಲಿ ಕಡಲ್ಕೊರೆತ ತೀವ್ರವಾಗಿದ್ದು ಸಚಿವರು,ಅಧಿಕಾರಿಗಳ ದಂಡಿನ ಜತೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಡಲ್ಕೊರೆತಕ್ಕೆ ತಕ್ಷಣವೇ ತಾತ್ಕಾಲಿಕ ಪರಿಹಾರ ನೀಡುವುದಾಗಿ ಹೇಳಿದ್ದು ಕೇವಲ ಭರವಸೆ ಮಾತ್ರವೇ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಪ್ರಶ್ನಿಸಿದ್ದಾರೆ.

ತೊಕ್ಕೊಟ್ಟಿನ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಳ್ಳಾಲದ ಕೆಲವು ಭಾಗದಲ್ಲಿ ಎಡಿಬಿ ಮುಖಾಂತರ ತಡೆಗೋಡೆ ನಿರ್ಮಾಣವಾಗಿದ್ದು ಸ್ವಲ್ಪಮಟ್ಟಿಗೆ ಕೊರೆತ ನಿಂತಿದೆ. ಆದರೆ ಎಡಿಬಿ ಕಾಮಗಾರಿ ಮುಗಿದ ನಂತರ ಅದಕ್ಕೆ ಕಾಲ ಕಾಲಕ್ಕೆ ವ್ಯವಸ್ಥೆ ಮಾಡದಿರುವುದರಿಂದ ಹಲವು ಮನೆಗಳು ಸಮುದ್ರ ಪಾಲಾಗಿದೆ.

ಕಳೆದ ಕೆಲವು ದಿನಗಳಲ್ಲಿ ಬಹಳಷ್ಟು ಅನಾಹುತ ಸಂಭವಿಸಿದ್ದರೂ ಮುಖ್ಯಂತ್ರಿಗಳು ಯಾವುದೇ ತಾತ್ಕಾಲಿಕ ಕ್ರಮ ಕೈಗೊಂಡಿಲ್ಲ ಎಂಬುದು ಸರಕಾರದ ನಾಚಿಕೆಗೇಡಿನ ಕೆಲಸ ಎಂದು ಲೇವಡಿ ಮಾಡಿದರು.ಈ ಭಾಗದಲ್ಲಿ ತಾತ್ಕಾಲಿಕ ಪರಿಹಾರವಾದರೂ ಕೈಗೊಳ್ಳದೆ ಇರುವ ಕ್ರಮವನ್ನು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಖಂಡಿಸುತ್ತಿದೆ.

ಶಾಶ್ವತ ತಡೆಗೋಡೆಯಾದರೂ ಅದಕ್ಕೆ ಬೇಕಾದ ವ್ಯವಸ್ಥೆ ಮಾಡುತ್ತಿರಬೇಕು. ಅದು ಮಾಡದಿದ್ದರೆ ಶಾಸಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಲಿದ್ದೇವೆ ಎಂದರು.

ಸುದ್ದಿಗೋಷ್ಟಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ದಿನೇಶ್ ರೈ,ಪ್ರಮುಖರಾದ ದಿನೇಶ್ ಕುಂಪಲ,ದೀಪಕ್ ಪಿಲಾರ್ ,ವಿಜಯ್ ಕಿಲ್ಲೆ,ಮನ್ಸೂರ್ ಮೊದಲಾದವರು ಉಪಸ್ಥಿತರಿದ್ದರು.

Edited By : Shivu K
Kshetra Samachara

Kshetra Samachara

16/07/2022 08:42 pm

Cinque Terre

8.39 K

Cinque Terre

0

ಸಂಬಂಧಿತ ಸುದ್ದಿ