ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಕೇಂದ್ರದ ನಯಾ ಪೈಸೆ ಅನುದಾನವಿಲ್ಲದೆ ಚತುಷ್ಪಥ ರಸ್ತೆ ನಿರ್ಮಾಣ: ಯು.ಟಿ.ಖಾದರ್

ಉಳ್ಳಾಲ: ಟೋಲ್ ರಗಳೆ ತಪ್ಪಿಸುವ ಉದ್ದೇಶದಿಂದ ಕೇಂದ್ರ ಸರಕಾರದಿಂದ ನಯಾ ಪೈಸೆ ಅನುದಾನವಿಲ್ಲದೆ ಕೇವಲ ರಾಜ್ಯ ಸರಕಾರದ ಅನುದಾನದಿಂದಲೇ ತೊಕ್ಕೊಟ್ಟುವಿನಿಂದ ಮುಡಿಪು ತನಕದ ರಸ್ತೆಯನ್ನ ಚತುಷ್ಪಥಗೊಳಿಸುತ್ತಿರುವುದಾಗಿ ವಿಧಾನ ಸಭಾ ಪ್ರತಿಪಕ್ಷ ಉಪನಾಯಕ ಶಾಸಕ‌ ಯು.ಟಿ ಖಾದರ್ ಹೇಳಿದರು.

ನಾಟೆಕಲ್ನಿಂಕದ ಅಸೈಗೋಳಿವರೆಗೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಗೆ ಅವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ತೊಕ್ಕೊಟ್ಟಿನಿಂದ ಮುಡಿಪುವರೆಗೆ ಸುಂದರವಾದ ಚತುಷ್ಪಥ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಚೆಂಬುಗುಡ್ಡೆಯಿಂದ ನಾಟೆಕಲ್ವಸರೆಗೆ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು ನಾಟೆಕಲ್ನಿಂ ದ ಅಸೈಗೋಳಿವರೆಗಿನ ಕಾಮಗಾರಿಗೆ 10 ಕೋಟಿ ರೂ. ಬಿಡುಗಡೆಯಾಗಿದೆ. ಮುಂದಿನ ಆರು ತಿಂಗಳಿನೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

ತೊಕ್ಕೊಟ್ಟಿನಿಂದ ಮುಡಿಪುವರೆಗೆ ಹಂತ ಹಂತವಾಗಿ ಅಭಿವೃದ್ಧಿಯಾಗುತ್ತಿರುವ ಚತುಷ್ಪಥ ರಸ್ತೆ ರಾಜ್ಯ ಸರಕಾರದಿಂದ ಅಭಿವೃದ್ಧಿಯಾಗಿರುವುದರಿಂದ ಟೋಲ್ ಮುಕ್ತವಾಗಲಿದೆ. ಗ್ರಾಮ ಪಂಚಾಯತ್ನಿಂ ದ ಬೀದಿ ದೀಪಗಳ ಕಂಬಗಳಿಗೆ ಜಾಹೀರಾತು ಪ್ರಕಟಿಸುವ ನಿಯಮ ಮಾಡಿ ಆ ಹಣದಿಂದ ಬೀದಿ ದೀಪದ ಖರ್ಚು ಭರಿಸಲಾಗುವುದು ಎಂದರು.

Edited By : Shivu K
Kshetra Samachara

Kshetra Samachara

13/07/2022 12:48 pm

Cinque Terre

14.29 K

Cinque Terre

2

ಸಂಬಂಧಿತ ಸುದ್ದಿ