ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕೃಷಿಹಾನಿಗೆ ಸರಕಾರ ಗರಿಷ್ಠ ಪರಿಹಾರ ನೀಡಬೇಕು: ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ದೀಪಕ್ ಕೋಟ್ಯಾನ್

ಉಡುಪಿ: ಕಳೆದ ಹತ್ತು ದಿನಗಳಿಂದ ಜಿಲ್ಲೆಯಾದ್ಯಂತ ಧಾರಾಕಾರ ಮಳೆ ಸುರಿಯುತ್ತಿರುವ ಪರಿಣಾಮ ಪ್ರವಾಹದಿಂದ ಜಿಲ್ಲೆಯ ಕೃಷಿಕರ ಸಾವಿರಾರು ಎಕರೆ ಪ್ರದೇಶದ ಭತ್ತ ಅಡಿಕೆ ಸೇರಿದಂತ ಹಲವಾರು ಬೆಳೆಗಳು ನಾಶವಾಗಿದ್ದು ಇದಕ್ಕೆ ರಾಜ್ಯ ಸರಕಾರ ಗರಿಷ್ಠ ಮೊತ್ತದ ಪರಿಹಾರವನ್ನು ನೀಡುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಆಗ್ರಹಿಸಿದ್ದಾರೆ.

ಜಿಲ್ಲೆಯ ರೈತರು ಈಗಷ್ಠೆ ಗದ್ದೆಗಳಲ್ಲಿ ನಾಟಿ ಕೆಲಸ ಆರಂಭಿಸಿದ್ದು ಇದೇ ಸಮಯದಲ್ಲಿ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಭತ್ತದ ಕೃಷಿ ಸಂಪೂರ್ಣವಾಗಿ ಕೊಳೆತು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ಕೃಷಿ ಮತ್ತು ತೋಟಗಾರಿಕೆ ಬೆಳೆಗಳಿಗೆ ಮಳೆ ಮತ್ತು ಪ್ರವಾಹದಿಂದ ದೊಡ್ಡ ಮೊತ್ತದ ಹೊಡೆತ ಬಿದ್ದಿದ್ದು ಇಲಾಖೆಯ ಅಧಿಕಾರಿಗಳು ಸಮೀಕ್ಷೆಯನ್ನು ನಡೆಸಲು ಆರಂಭಿಸಿದ್ದು ಸಮೀಕ್ಷಾ ವರದಿಯನ್ನು ಸಿದ್ದಪಡಿಸುವಾಗ ಯಾವುದೇ ರೈತರ ಹೆಸರೂ ಕೂಡ ಬಿಟ್ಟುಹೋಗದಂತೆ ಮತ್ತು ಗೊಂದಲಕ್ಕೆ ಕಾರಣವಾಗಬಾರದು.

ಸರಕಾರ ಸದ್ಯ ಕೃಷಿ ಮತ್ತು ತೋಟಗಾರಿಕಾ ಬೆಳೆ ಹಾನಿಗೆ ನೀಡುವ ಪರಿಹಾರ ರೈತರು ಮಾಡಿದ ಖರ್ಚಿಗೆ ಹೋಲಿಸಿದರೆ ಏನೇನು ಸಾಲದು. ಸರಕಾರ ಈ ಕುರಿತು ಚಿಂತನೆ ನಡೆಸಿ ಹಾನಿಗೊಳಾಗಾದ ರೈತರಿಗೆ ಗರಿಷ್ಠ ಮೊತ್ತ ಲಭಿಸುವಂತೆ ಪ್ಯಾಕೇಜ್ ಘೋಷಣೆ ಮಾಡಿದರೆ ಇದರಿಂದ ಅವರಿಗೆ ಕೊಂಚ ನೆಮ್ಮದಿ ಸಿಗಲು ಸಾಧ್ಯವಿದೆ. ಪ್ರವಾಹದಿಂದಾಗಿ ಹಲವಾರು ರೈತರ ಜಾನುವಾರುಗಳು ಕೂಡ ಸಮಸ್ಯೆಗೆ ಸಿಲುಕಿದ್ದು ಅಂತಹ ಹೈನುಗಾರರಿಗೆ ಕೂಡ ಸರಕಾರ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

11/07/2022 06:15 pm

Cinque Terre

12.36 K

Cinque Terre

1

ಸಂಬಂಧಿತ ಸುದ್ದಿ