ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: "ಜಾನುವಾರು ಕುರ್ಬಾನಿ, ಬಲಿ ನಿಷೇಧ ಕಾಯ್ದೆ ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಿ"

ಮಂಗಳೂರು: ಜಾನುವಾರುಗಳನ್ನು ಕುರ್ಬಾನಿ ಹಾಗೂ ಬಲಿ ನೀಡಲು ನಿಷೇಧವಿರುವ ಕಾಯ್ದೆಯನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಇರುವ ವಿಎಚ್ ಪಿ ಆಗ್ರಹಿಸಿದೆ.

ವಿಎಚ್ ಪಿ ಪ್ರಾಂತ ಗೋರಕ್ಷಾ ಪ್ರಮುಖ್ ಕಟೀಲು ದಿನೇಶ್ ಪೈ ಮಾತನಾಡಿ, ಜಾನುವಾರುಗಳನ್ನು ಕುರ್ಬಾನಿ ಹಾಗೂ ಬಲಿಗಾಗಿ ಸಾಗಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಅಕ್ರಮವಾಗಿ ಸಾಗಾಟ ಮಾಡುವ ಚಾಲಕರು, ಜಾನುವಾರು ಮಾಲಕರು ಹಾಗೂ ವಾಹನ ವಾಹನದ ಮಾಲಕರು ಅಪರಾಧಿಗಳಾಗುತ್ತಾರೆ. ಇಂತಹ ಅಕ್ರಮ ಜಾನುವಾರು ಸಾಗಾಟ ಮಾಡುವವರನ್ನು ಪೊಲೀಸರು ವಶಕ್ಕೆ ತೆಗೆದುಕೊಳ್ಳುವುದು ಮಾತ್ರವಲ್ಲ, ಸಾರ್ವಜನಿಕರು ಅದನ್ನು ತಡೆದು ಆರೋಪಿಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸಲು ಅವಕಾಶವಿದೆ. ಅಲ್ಲದೆ ಅಕ್ರಮ ಗೋ ಸಾಗಾಟಗಾರರ ಬಗ್ಗೆ ಮಾಹಿತಿ ದೊರೆತಲ್ಲಿ 112 ಅಥವಾ ಆ್ಯನಿಮಲ್ ಹೆಲ್ಪ್ ಲೈನ್ 2277100200 ಗೆ ಕರೆ ಮಾಡಿ ತಿಳಿಸಬಹುದು‌.

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020ರನ್ವಯ 13 ವರ್ಷದೊಳಗಿನ ಜಾನುವಾರುಗಳನ್ನು ಬಲಿ, ಕುರ್ಬಾನಿ ಮಾಡಲು ಅವಕಾಶವಿಲ್ಲ‌. ಈ ಅಪರಾಧ ಸಾಬೀತಾದಲ್ಲಿ ಸೆಕ್ಷನ್ 12ರ ಪ್ರಕಾರ 3-7 ವರ್ಷಗಳ ಜೈಲು ಶಿಕ್ಷೆ ಹಾಗೂ 50 ಸಾವಿರ ರೂ. ನಿಂದ 5 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಈ ಅಪರಾಧ ಮರುಕಳಿಸಿದ್ದಲ್ಲಿ 10 ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ಅಲ್ಲದೆ, ಬಲಿ ಕೊಟ್ಟ ಸ್ಥಳವನ್ನು ಮುಟ್ಟುಗೋಲು ಮಾಡಬಹುದು. ಅವರ ಮೇಲಿನ ಅಪರಾಧ ಸಾಬೀತಾದಲ್ಲಿ ಈ ಸ್ಥಳ ಶಾಶ್ವತವಾಗಿ ಮುಟ್ಟುಗೋಲು ಹಾಕಲಾಗುತ್ತದೆ ಎಂದರು.

Edited By : Manjunath H D
Kshetra Samachara

Kshetra Samachara

01/07/2022 07:40 pm

Cinque Terre

6.7 K

Cinque Terre

1