ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: "ಜಗತ್ತಿನಲ್ಲಿ ಇಸ್ಲಾಂ ಇರುವ ತನಕ ಶಾಂತಿ ಇರುವುದಿಲ್ಲ"

ಉಳ್ಳಾಲ: ಜಗತ್ತಿನಲ್ಲಿ ಇಸ್ಲಾಂ ಇರುವ ತನಕ ಶಾಂತಿ ಇರುವುಲ್ಲ. ಹಾಗಂತ ನಾನು ಧರ್ಮ ನಿಂದನೆ ಮಾಡುತ್ತಿಲ್ಲ. ಯಾಕೆಂದರೆ ಇಸ್ಲಾಂ ಅನ್ನೋದು ಧರ್ಮವೇ ಅಲ್ಲ, ಅದೊಂದು ಕೇವಲ ಮತ ಎಂದು ಹಿಂದೂ ಜಾಗರಣ ವೇದಿಕೆ ಪುತ್ತೂರು ಜಿಲ್ಲಾ ಸಹ ಸಂಯೋಜಕ‌ ನರಸಿಂಹ ಮಾಣಿ ಆಕ್ರೋಶ ವ್ಯಕ್ತ ಪಡಿಸಿದರು.

ರಾಜಸ್ಥಾನದ ಉದಯಪುರದಲ್ಲಿ ಕ್ರೂರಿ ಮುಸ್ಲಿಂ ಜಿಹಾದಿಗಳಿಂದ ನಡೆದ ಅಮಾಯಕ ಟೈಲರ್ ಕನ್ಹಯ್ಯ ಲಾಲ್ ಅವರ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆ ಉಳ್ಳಾಲ ತಾಲೂಕು ವತಿಯಿಂದ ತೊಕ್ಕೊಟ್ಟಿನ ಫ್ಲೈ ಓವರ್ ಕೆಳಗಡೆ ಇಂದು ಸಂಜೆ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಇಸ್ಲಾಂನಿಂದಲೇ ಜಗತ್ತಿನಾದ್ಯಂತ ಬೇರೆ ಬೇರೆ ಭಯೋತ್ಪಾದನೆ ಸಂಘಟನೆ ಹೆಸರಲ್ಲಿ ಅಶಾಂತಿ ನಡೆಯುತ್ತಿದೆ. ಇಸ್ಲಾಮನ್ನು ಕರುಣೆ ಎಂದು ಮುಸ್ಲಿಂ ಧರ್ಮಗುರುಗಳು ಹೇಳುತ್ತಾರೆ. ಪ್ರವಾದಿಗಾಗಿ ಓರ್ವ ಅಮಾಯಕನ ಶಿರಚ್ಛೇದಗೊಳಿಸಿ ನಮ್ಮ‌ ದೇಶದ ಪ್ರಧಾನಿಯನ್ನೇ ಕೊಲೆ ಮಾಡುತ್ತೇವೆ ಎಂದು ಬಹಿರಂಗವಾಗಿ ಹೇಳುವುದು ಕ್ರೌರ್ಯವೇ ಹೊರತು ಕರುಣೆ ಆಗಲು ಎಂದಿಗೂ ಸಾಧ್ಯವಿಲ್ಲ ಎಂದು ಹರಿಹಾಯ್ದರು.

ಹಿಂದೂ ಜಾಗರಣ ವೇದಿಕೆ ಪ್ರಮುಖರಾದ‌ ವಿಜಯ್ ಪ್ರಕಾಶ್ ಕುಂಪಲ, ಮನೋಜ್ ತೊಕ್ಕೊಟ್ಟು, ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿ ಚರಣ್ ಕುತ್ತಾರ್, ಕಾರ್ಯದರ್ಶಿಗಳಾದ ಶೈಲೇಶ್ ತಲಪಾಡಿ, ಮಹೇಶ್ ಪಜೀರ್ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Edited By : Manjunath H D
PublicNext

PublicNext

30/06/2022 08:22 pm

Cinque Terre

52.07 K

Cinque Terre

8

ಸಂಬಂಧಿತ ಸುದ್ದಿ