ಉಳ್ಳಾಲ: ಉಳ್ಳಾಲ ಕಡಲ್ಕೊರೆತ ಪ್ರದೇಶವಾದ ಸೀಗ್ರೌಂಡ್ ಬಳಿಗೆ ಶಾಸಕ ಯು.ಟಿ ಖಾದರ್ ಭಾನುವಾರ ಬೆಳಗ್ಗೆ ಭೇಟಿ ನೀಡಿ ಕಡಲ್ಕೊರೆತದಿಂದ ಅಪಾಯದಂಚಿನಲ್ಲಿರುವ ಮನೆಗಳ ಪರಿಶೀಲನೆ ನಡೆಸಿದರು.
ಈ ವೇಳೆ ಪ್ರತಿಕ್ರಿಯಿಸಿದ ಅವರು ಹಿಲರಿ ನಗರದಲ್ಲಿ ಕಳೆದ ಸಲ ಕಡಲ್ಕೊರೆತ ತಡೆಯುವ ನಿಟ್ಟಿನಲ್ಲಿ ಸ್ವಲ್ಪ ಕೆಲಸ ಮಾಡಲಾಗಿದ್ದು ಇನ್ನೂ 50% ಕೆಲಸ ಬಾಕಿ ಇದೆ. ಕಳೆದ ಎರಡು ವರ್ಷದಿಂದ ಇಲ್ಲಿನ ಜನರು ಪರಿಸ್ಥಿತಿಯ ಕುರಿತು ನನ್ನ ಗಮನಕ್ಕೆ ತಂದಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಮಂತ್ರಿಗಳಿಗೆ ಇಲ್ಲಿನ ಪರಿಸ್ಥಿತಿ ತಿಳಿಸಿದ್ದೇನೆ. ಕೆಐಡಿಬಿಐ ಮೀಟಿಂಗ್‌ನಲ್ಲೂ ಬಟ್ಟಂಪಾಡಿ ಹಾಗೂ ಈ ಪ್ರದೇಶದ ಬಗ್ಗೆ ಪ್ರಸ್ತಾಪಿಸಿದ್ದೇನೆ. ಆದರೆ ಅದ್ಯಾವುದಕ್ಕೂ ಸಕಾರಾತ್ಮಕ ಪರಿಶೀಲನೆ ಮತ್ತು ಕೆಲಸ ನಡೆದಿಲ್ಲ. ಸರಕಾರ ತಕ್ಷಣ ಇಲ್ಲಿ ಎರಡು ದಿನದ ಕೆಲಸ ಮಾಡಿದರೂ ಸಾಕು. ಇಪ್ಪತ್ತು ಮನೆ, ರಸ್ತೆ ಉಳಿಯಬಹುದು ಎಂದರು. ನಗರಸಭೆ ಅಧ್ಯಕ್ಷೆ ಚಿತ್ರಕಲಾ ಚಂದ್ರಕಾಂತ್, ಕೌನ್ಸಿಲರ್ ಸಪ್ನಾ ಹರೀಶ್, ಮಹಮ್ಮದ್ ಮುಕ್ಕಚ್ಚೇರಿ, ಖಲೀಲ್ ಹಾಗೂ ಪೌರಾಯುಕ್ತೆ ವಿದ್ಯಾ ಕಾಳೆ ಜೊತೆಗಿದ್ದರು.
Kshetra Samachara
26/06/2022 03:04 pm