ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಬ್ರಿಟಿಷ್ ದಬ್ಬಾಳಿಕೆಗಿಂತ ಕಾಂಗ್ರೆಸ್ ತುರ್ತುಪರಿಸ್ಥಿತಿ ಘೋರ; ನಳಿನ್

ಮಂಗಳೂರು: ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು ತಮ್ಮನ್ನು ಪ್ರಶ್ನಿಸಿದರೆಂಬ ಕಾರಣಕ್ಕೆ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದರು‌. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ, ಸಂವಿಧಾನವನ್ನು ಕತ್ತಲೆಯಲ್ಲಿಟ್ಟು, ದೇಶವನ್ನು ಮತ್ತೊಮ್ಮೆ ಗುಲಾಮಗಿರಿಗೆ ಅಟ್ಟಿ ಜನರಿಗೆ ಸರ್ವಾಧಿಕಾರಿ ಧೋರಣೆ ತೋರಿಸಿದರು. ಬ್ರಿಟಿಷ್ ಕಾಲದಲ್ಲಿ ಆಗಿರುವ ದಬ್ಬಾಳಿಕೆಗಿಂತ ಎರಡು ಪಟ್ಟು ಅಧಿಕ ಕಾಂಗ್ರೆಸ್ ಕಾಲಘಟ್ಟದ ತುರ್ತುಪರಿಸ್ಥಿತಿಯಲ್ಲಿ ಆಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಹೇಳಿದರು.

ನಗರದ ವೈಶ್ಯ ಎಜುಕೇಶನ್ ಸೊಸೈಟಿ ಸಭಾಂಗಣದಲ್ಲಿ ತುರ್ತುಪರಿಸ್ಥಿತಿಯ ಕರಾಳ ದಿನ 45ನೇ ವರ್ಷದ ಕಾರ್ಯಕ್ರಮದಲ್ಲಿ ಸಂಸದರು ಮಾತನಾಡಿ, ಅಂದಿನ‌ ರಾಷ್ಟ್ರಪತಿಯವರು ರಬ್ಬರ್ ಸ್ಟ್ಯಾಂಪ್ ಆದ್ದರಿಂದ ತುರ್ತುಪರಿಸ್ಥಿತಿ ಹೇರಲಾಯಿತು. ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ರಾಷ್ಟ್ರಪತಿಗಳನ್ನು ದುರುಪಯೋಗ ಮಾಡಿತ್ತು. ರಾಷ್ಟ್ರಪತಿಗಳಲ್ಲಿ ಒತ್ತಾಯವಾಗಿ ಸಹಿ ಹಾಕಿಸಿ ಹತ್ತಾರು ಸರಕಾರಗಳನ್ನು ಕಿತ್ತೊಗೆಯಲಾಯಿತು.

ಕಾಂಗ್ರೆಸ್ ನಲ್ಲಿ‌ ಸರ್ವಾಧಿಕಾರಿ ಮನೋಭಾವ ಹಾಗೂ ತಮ್ಮನ್ನು ಯಾರೂ ಪ್ರಶ್ನಿಸಬಾರದೆಂಬ ಎರಡು ಮಾನಸಿಕತೆ ಗಟ್ಟಿಯಾಗಿದೆ. ಕಾಂಗ್ರೆಸ್ ದೇಶದ ಕಾನೂನು, ಸಂವಿಧಾನಕ್ಕೆ ಗೌರವ ಕೊಡದಿರುವುದೇ ತುರ್ತುಪರಿಸ್ಥಿತಿ ಹೇರಲು ಕಾರಣ. ತುರ್ತುಪರಿಸ್ಥಿತಿ ಕಾಲಘಟ್ಟದಲ್ಲಿ ಹೋರಾಡಿದವರಿಂದ ನಾವು ಇಂದು ಅಧಿಕಾರಕ್ಕೆ ಬಂದಿದ್ದೇವೆ. ಈ ರೀತಿಯ ಸ್ಮರಣೆ ನಮ್ಮನ್ನು ಇನ್ನಷ್ಟು ಎಚ್ಚರಿಸುತ್ತದೆ ಎಂದರು.

Edited By : Manjunath H D
PublicNext

PublicNext

25/06/2022 05:12 pm

Cinque Terre

35.33 K

Cinque Terre

4

ಸಂಬಂಧಿತ ಸುದ್ದಿ