ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮಾಜಿ ಸಿಎಂ ವೀರಪ್ಪ ಮೊಯ್ಲಿ ಭಾಷಣಕ್ಕೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಅಡ್ಡಿ!

ಉಡುಪಿ: ಉಡುಪಿಯಲ್ಲಿ ನಡೆದ ನವ ಸಂಕಲ್ಪ ಶಿಬಿರದಲ್ಲಿ ಕೈ ಕಾರ್ಯಕರ್ತರು ಮಾಜಿ ಸಿಎಂ ವೀರಪ್ಪ ಮೊಯ್ಲಿ ಭಾಷಣಕ್ಕೆ ಅಡ್ಡಿ ನಡೆದ ಪ್ರಸಂಗ ನಡೆಯಿತು. ನಗರದ ಅಮೃತ್ ಗಾರ್ಡನ್‌ನಲ್ಲಿ ಬೆಳಿಗ್ಗೆಯಿಂದಲೇ ಶಿಬಿರ ನಡೆಯುತ್ತಿತ್ತು. ಕಾಂಗ್ರೆಸ್ ಮುಖಂಡರು ಮತ್ತು ನೂರಾರು ಕಾರ್ಯಕರ್ತರು ಶಿಬಿರದಲ್ಲಿ ಭಾಗಿಯಾಗಿದ್ದರು.

ಶಿಬಿರದಲ್ಲಿ ವೀರಪ್ಪ ಮೊಯ್ಲಿ ಉದ್ಘಾಟನೆ ಭಾಷಣ ಮಾಡುತ್ತಿದ್ದ ವೇಳೆ ಕಾರ್ಯಕರ್ತರ ತಾಳ್ಮೆಯ ಕಟ್ಟೆಯೊಡೆಯಿತು. ಹಳೇ ಕಥೆ ಸಾಕು ಮುಂದೇನು ಮಾಡಬೇಕು ಹೇಳಿ... ಪಕ್ಷ ಸಂಘಟಿಸಲು ಹೊಸತೇನಾದರೂ ಹೇಳಿ ಎಂದು ಕುಂದಾಪುರ ಭಾಗದ ಕಾಂಗ್ರೆಸ್ ಕಾರ್ಯಕರ್ತರು ನಾಯಕ ಮೊಯ್ಲಿ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಯಕರ್ತರ ವರ್ತನೆಗೆ ಕುಪಿತಗೊಂಡ ಮೊಯ್ಲಿ, ನಿಮ್ಮ ಸಮಸ್ಯೆ ಏನು ಹೇಳಿ? ನಿಮಗೆ ನನ್ನ ಮಾತು ಬೇಡವಾದರೆ ಈಗಲೇ ನಿಲ್ಲಿಸುತ್ತೇನೆ. ನನಗೆ ಭಾಷಣ ಮಾಡುವ ಚಟ ಇಲ್ಲ. ಕಾರ್ಯಾಗಾರದಲ್ಲಿ ಈ ವಿಚಾರಗಳನ್ನೆಲ್ಲ ಕಾರ್ಯಕರ್ತರು ತಿಳಿದುಕೊಳ್ಳಬೇಕು. ಕಾರ್ಯಾಗಾರದಲ್ಲಿ ಭಾಗವಹಿಸಲು ಮಾನಸಿಕ ಸಿದ್ಧತೆ ಬೇಕು. ಕೆಲವು ವರ್ಗದವರಿಗೆ ನಾನು ಹೇಳುವ ಮಾತು ಕೇಳಲು ಕಷ್ಟವಾಗುತ್ತದೆ, ಕಷ್ಟವಾದರೂ ಕೂಡ ನಾವು ಪಕ್ಷ ಕಟ್ಟಬೇಕು ಎಂದು ಮೊಯ್ಲಿ ಕಾರ್ಯಕರ್ತರಿಗೆ ತಿಳಿ ಹೇಳುವ ಪ್ರಯತ್ನ ಮಾಡಿದರು.ಬಳಿಕ ಮಾಜಿ ಸಚಿವ ಸೊರಕೆಕಾರ್ಯಕರ್ತರನ್ನು ಸಮಾಧಾನಪಡಿಸಿದರು.

Edited By :
PublicNext

PublicNext

24/06/2022 08:03 pm

Cinque Terre

53.06 K

Cinque Terre

3

ಸಂಬಂಧಿತ ಸುದ್ದಿ