ಮಂಗಳೂರು: 2024ರ ಚುನಾವಣೆ ನಂತರ ಈ ದೇಶದಲ್ಲಿ 50 ರಾಜ್ಯಗಳು ಉದಯವಾಗುತ್ತವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದು, ಸಿದ್ಧತೆ ನಡೆಯುತ್ತಿದೆ ಎಂದು ಸಚಿವ ಉಮೇಶ್ ಕತ್ತಿ ಮತ್ತೆ ವರಸೆ ತೆಗಿದ್ದಿದ್ದಾರೆ.
ಮಂಗಳೂರಿನ ವೇಣೂರಿನಲ್ಲಿ ಮಾತನಾಡಿದ ಅವರು, 'ಎರಡೂವರೆ ಕೋಟಿ ಇದ್ದ ಜನಸಂಖ್ಯೆ ರಾಜ್ಯದಲ್ಲಿ ಆರೂವರೆ ಕೋಟಿ ಆಗಿದೆ. ಅಂದರೆ ಇದರ ಅರ್ಥ, ಜನಸಂಖ್ಯೆ ಬೆಳೆದಂತೆ ರಾಜ್ಯವನ್ನು ಇಬ್ಭಾಗ ಮಾಡಬೇಕಿದೆ ಎಂಬುದು. ಕರ್ನಾಟಕದಲ್ಲಿ ಎರಡು, ಉತ್ತರ ಪ್ರದೇಶ ಐದು ರಾಜ್ಯ ಮತ್ತು ಮಹಾರಾಷ್ಟ್ರ 3 ರಾಜ್ಯ ಹೀಗೆ ಇಡೀ ದೇಶದಲ್ಲಿ ಒಟ್ಟು 50 ರಾಜ್ಯ ನಿರ್ಮಾಣವಾಗಲಿದೆ. ಈ ಬಗ್ಗೆ ದೇಶದ ಪ್ರಧಾನಿಗಳು ಚಿಂತನೆ ನಡೆಸಿದ್ದಾರೆ ಎಂಬುದು ನನ್ನ ಅನಿಸಿಕೆ ಉತ್ತರ ಕರ್ನಾಟಕಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಿದ್ದೇನೆ, ಮುಂದೆಯೂ ಎತ್ತುತ್ತೇನೆ. ಆದರೂ ಅಖಂಡ ಕರ್ನಾಟಕದಲ್ಲಿ ತೊಂದರೆ ಆಗಬಾರದು ಅನ್ನೋ ಕಾರಣಕ್ಕೆ ಮುಖ್ಯಮಂತ್ರಿಗಳನ್ನ ಎಚ್ಚರಿಸ್ತೇನೆ. ಅದು ಬಿಟ್ಟರೆ ನಾವು ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಪ್ರಧಾನಿ ಚಿಂತನೆ ಮಾಡಿದ್ದಾರೆ. ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಲಿ, ಅಭಿವೃದ್ಧಿ ಆಗಲಿ ಎಂದರು.
Kshetra Samachara
23/06/2022 05:14 pm