ಉಳ್ಳಾಲ:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಚಾರಣೆ ಸೋಗಲ್ಲಿ ಕಿರುಕುಳ ನೀಡುತ್ತಿರುವ ಇಡಿ ಇಲಾಖೆಯು ಅದಾನಿ ಮತ್ತು ಬಿಜೆಪಿಗರ ಸಂಪತ್ತನ್ನ ತುಲನೆ ಮಾಡಲಿ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ಉಳ್ಳಾಲ್ ಕಿಡಿಕಾರಿದ್ದಾರೆ.
ತೊಕ್ಕೊಟ್ಟಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಐಟಿ ಮತ್ತು ಇಡಿ ಬಿಜೆಪಿಯ ಕೈಗೊಂಬೆಯಾಗಿ ಬಿಟ್ಟಿದೆ.ದೇಶಾದ್ಯಂತ ಕಾಂಗ್ರೆಸ್ ನಾಯಕರನ್ನೇ ಗುರಿಯಾಗಿಸಿ ದಾಳಿ ನಡೆಯುತ್ತಿದೆ.
ಅದಾನಿಯಂತಹವರ ಸಂಪತ್ತು ತುಲನೆ ಮಾಡುವ ಗೋಜಿಗೆ ಯಾರೂ ಹೋಗುವುದಿಲ್ಲ.ಇಂತಹ ಷಡ್ಯಂತರದ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾದಾಗ ಪೊಲೀಸರು ಕಚೇರಿಗೆ ನುಗ್ಗಿ ಪ್ರತಿಭಟನೆಗೆ ಅಡ್ಡಿ ಪಡಿಸಿದ್ದಾರೆ.
ರಾಹುಲ್ ಗಾಂಧಿ ಅವರಿಗೆ ಇಡಿ ,ಬಿಜೆಪಿ ಸರ್ಕಾರದ ಕಿರುಕುಳ, ಪ್ರವಾದಿ ಮುಹಮ್ಮದರ ನಿಂದನೆ ಮಾಡಿದ ನೂಪುರ್ ಶರ್ಮಾರ ಧರ್ಮ ವಿರೋಧಿ ಹೇಳಿಕೆ ಖಂಡಿಸಿ ಜೂನ್ 21 ರಂದು ಸಂಜೆ 4 ಗಂಟೆಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ತೊಕ್ಕೊಟ್ಟುವಿನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ಅವರು ಹೇಳಿದರು.
Kshetra Samachara
20/06/2022 07:42 pm