ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಅಗ್ನಿಪಥ್ ಹಿಂಸಾಚಾರ, ಕೃಷಿ ಕಾಯ್ದೆ ವಿರೋಧಿಸಿದವರ ಷಡ್ಯಂತ್ರದ ಭಾಗ: ಶೋಭಾ ಕರಂದ್ಲಾಜೆ

ಉಡುಪಿ: ಈ ಹಿಂದೆ ಕೃಷಿ ಮಸೂದೆಯ ವಿಚಾರದಲ್ಲೂ ವಿದೇಶಿಯರ ಜೊತೆ ಸೇರಿ ಗೊಂದಲ ಸೃಷ್ಟಿಸಲಾಗಿತ್ತು. ಈ ಮೂಲಕ ನಮ್ಮ ದೇಶಕ್ಕೆ ತೊಂದರೆ ಕೊಡಲು ಕೆಲವರು ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿದ್ದಾರೆ. ಇದು ಕೂಡ ಆ ಷಡ್ಯಂತ್ರದ ಭಾಗವಾಗಿದೆ ಎಂದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಮಾತನಾಡಿದ ಅವರು, ಅಗ್ನಿಪಥ್ ಯೋಜನೆಯನ್ನು ವಿರೋಧಿಸಿ ಹಿಂಸಾಚಾರ ನಡೆಸಿ ರೈಲು ಸುಟ್ಟು ಹಾಕಿದವರು ಯಾರು ಕೂಡ ಸೈನ್ಯ ಸೇರುವವರಲ್ಲ. ಸೈನ್ಯ ಸೇರದವರು ಮತ್ತು ದೇಶಭಕ್ತಿ ಬಗ್ಗೆ ಮಾತನಾಡದವರು ಈ ಹಿಂಸಾಚಾರ ನಡೆಸುತ್ತಿದ್ದಾರೆ. ದೇಶದ ಸೈನ್ಯದ ವಿಚಾರದಲ್ಲಿ ಹಿಂದಿನಿಂದಲೂ ಸೈನಿಕರಿಗೆ ಕಲ್ಲು ಹೊಡೆಯುವುದು ಮತ್ತು ಸೈನಿಕರಿಗೆ ಕಲ್ಲು ಹೊಡೆದಾಗ ಎಲ್ಲ ಪಕ್ಷದವರು ಮೌನವಾಗಿರುವುದನ್ನು ನಾವು ಕಾಶ್ಮೀರದಿಂದ ಕನ್ಯಾ ಕುಮಾರಿವರೆಗೆ ಹಲವು ಸಂದರ್ಭದಲ್ಲಿ ನೋಡಿದ್ದೇವೆ.

ಬೇರೆ ಬೇರೆ ದೇಶಗಳಲ್ಲಿ ಹೈಸ್ಕೂಲ್ ಶಿಕ್ಷಣದಲ್ಲಿಯೇ ಸೈನ್ಯವನ್ನು ಒಂದು ಪಾಠವಾಗಿ ಕಲಿಸಲಾಗುತ್ತದೆ. ಆ ಮೂಲಕ ಅಲ್ಲಿನ ಯುವಕರಲ್ಲಿ ದೇಶಭಕ್ತಿ ಮೂಡಿಸುವ ಕೆಲಸ ನಡೆಸಲಾಗುತ್ತಿದೆ. ಅದೇ ರೀತಿ ನಮ್ಮ ಯುವಕರು ನಾಲ್ಕು ವರ್ಷ ಅಗ್ನಿವೀರ್‌ಗಳಾದರೆ ದೇಶದಲ್ಲಿ ಒಳ್ಳೆಯ ಕೆಲಸ ಮಾಡುತ್ತಾರೆ ಮತ್ತು ಹಳ್ಳಿಗೆ ಮರಳಿದ ಬಳಿಕ ತಾವು ಜೀವನದಲ್ಲಿ ಶಿಸ್ತು ರೂಢಿಸಿಕೊಳ್ಳುವುದರ ಜೊತೆಗೆ ಸುತ್ತಮುತ್ತಲಿನ ಜನರಿಗೂ ಶಿಸ್ತು ಕಲಿಸುತ್ತಾರೆ. ಆದರೆ ಇದೆಲ್ಲವೂ ವಿರೋಧ ಪಕ್ಷಗಳಿಗೆ ಬೇಕಾಗಿಲ್ಲ. ಅವರಿಗೆ ಬೇಕಾಗಿರುವುದು ಕೇವಲ ವೋಟ್ ಬ್ಯಾಂಕ್ ರಾಜಕಾರಣ ಮಾತ್ರ. ಅದಕ್ಕಾಗಿ ಸಮಾಜ ಕೆಟ್ಟ ದಾರಿಯಲ್ಲಿಯೇ ಸಾಗಬೇಕೆಂದು ವಿರೋಧ ಪಕ್ಷಗಳು ಬಯಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Edited By :
Kshetra Samachara

Kshetra Samachara

20/06/2022 05:45 pm

Cinque Terre

5.72 K

Cinque Terre

3

ಸಂಬಂಧಿತ ಸುದ್ದಿ