ಕುಂದಾಪುರ: ಮಾಜಿ ಶಾಸಕ ,ಬಿಜೆಪಿ ಮುಖಂಡ ಎ.ಜಿ.ಕೊಡ್ಗಿ(93) ಅಂತ್ಯಸಂಸ್ಕಾರ ಇವತ್ತು ಅಮಾಸೆಬೈಲಿನಲ್ಲಿ ನಡೆಯಿತು. ಹಿರಿಯ ನಾಯಕನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು.
ಅಂತ್ಯಸಂಸ್ಕಾರಕ್ಕೂ ಮುನ್ನ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು ,ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಸಂಸದ ಬಿವೈ ರಾಘವೇಂದ್ರ ಸಹಿತ ಅನೇಕ ಗಣ್ಯರು ಭಾಗಿಯಾಗಿದ್ದರು. ಹಿರಿಯ ಬಿಜೆಪಿ ನಾಯಕ ಎಜಿ ಕೊಡ್ಗಿ ನಿನ್ನೆ ಅಲ್ಪಕಾಲದ ಅನಾರೋಗ್ಯದ ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿನಿಧನರಾಗಿದ್ದರು.ಅವರು ಎರಡು ಬಾರಿ ಬೈಂದೂರಿನಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
PublicNext
14/06/2022 03:52 pm