ಉಡುಪಿ: ಬಿಜೆಪಿ ನಾಯಕ ಮೀನುಗಾರ ಮುಖಂಡ ಯಶಪಾಲ್ ಸುವರ್ಣ ಅವರಿಗೆ ಬೆದರಿಕೆ ಹಾಕಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಬೇಕು ಎಂದು ಮೀನುಗಾರ ಮಹಿಳೆಯರು ಇವತ್ತು ಪೊಲೀಸ್ ವರಿಷ್ಠಾಧಿಕಾರಿಯವರಿಗೆ ಮನವಿ ಸಲ್ಲಿಸಿದರು. ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ಯಶಪಾಲ್ ಸುವರ್ಣ ಅವರು ಮೀನುಗಾರ ಮುಖಂಡರಾಗಿ ಮೀನುಗಾರ ಮಹಿಳೆಯರಿಗೆ ಸಾಕಷ್ಟು ಸಹಾಯ ಮಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳಿಗೆ ತಿಳಿಗೇಡಿಗಳು ಜೀವ ಬೆದರಿಕೆ ಹಾಕಿದ್ದನ್ನು ಖಂಡಿಸುತ್ತೇವೆ. ಅವರ ಪರವಾಗಿ ದೇವರಿದ್ದಾರೆ. ನಮ್ಮ ಆಶೀರ್ವಾದ ಅವರ ಮೇಲೆ ಇದೆ ಹೀಗಾಗಿ ಅವರನ್ನು ಏನೂ ಮಾಡಲಾಗುವುದಿಲ್ಲ. ಎಸ್‌ಪಿ ಅವರನ್ನು ಇವತ್ತು ಭೇಟಿ ಮಾಡಿ ಬೆದರಿಕೆ ಹಾಕಿದವರನ್ನು ತಕ್ಷಣ ಬಂಧಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.
Kshetra Samachara
13/06/2022 03:56 pm