ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕೇಂದ್ರ ಹಾಗೂ ರಾಜ್ಯ ಸರಕಾರದ ಜನಪರ ಯೋಜನೆಗಳನ್ನು ತಿಳಿಸಿ: ವಿನೋದ್ ಸಾಲ್ಯಾನ್

ಮುಲ್ಕಿ:ಬಿಜೆಪಿ ಮಹಾಶಕ್ತಿ ಕೇಂದ್ರ ಮುಲ್ಕಿ ನಗರ ವತಿಯಿಂದ ಭಾರತದ ಪ್ರಧಾನಿ ನರೇಂದ್ರ ಮೋದಿ ದೇಶದ ಪ್ರಧಾನಮಂತ್ರಿಯಾಗಿ 8 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೇವೆ,ಸುಶಾಸನ,ಬಡವರ ಕಲ್ಯಾಣ ವೆಂಬ ಧೇಯವಾಕ್ಯದೊಂದಿಗೆ ಜನಪರ ಯೋಜನೆಗಳಾದ ಆಯುಷ್ಮಾನ್ ಕಾರ್ಡ್,ಇ-ಶ್ರಮ ಕಾರ್ಡ್,ಹಾಗೂ ಎಪಿಎಲ್ ರೇಷನ್ ಕಾರ್ಡ್ ಉಚಿತ ನೋಂದಾವಣೆ ಕಾರ್ಯಕ್ರಮ ಬಪ್ಪನಾಡು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದ ಜ್ಞಾನಮಂದಿರ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂಚಾಲಕ ವಿನೋದ್ ಸಾಲ್ಯಾನ್ ಬೆಳ್ಳಾಯರು ವಹಿಸಿ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಬಡವರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದರು.

ಮುಲ್ಕಿ ಶಕ್ತಿ ಕೇಂದ್ರದ ಅಧ್ಯಕ್ಷ ಹರಿಶ್ಚಂದ್ರ ಕೆಎಸ್ ರಾವ್ ನಗರ, ಸಹಕಾರಿ ಪ್ರಕೋಷ್ಠದ ಸಂಚಾಲಕ ರಂಗನಾಥ ಶೆಟ್ಟಿ, ಮುಲ್ಕಿ ನಪಂ ಸದಸ್ಯರಾದ ಹರ್ಷರಾಜ ಶೆಟ್ಟಿ, ರಾಧಿಕಾ ಕೋಟ್ಯಾನ್, ಶಾಂತ ಕಿರೋಡಿಯನ್, ದಯಾವತಿ ಅಂಚನ್,ವೀರಣ್ಣ ಅರಳ ಗುಂಡಿ, ಮಾಜಿ ಸದಸ್ಯರಾದ ಪುರುಷೋತ್ತಮ್ ರಾವ್,ಸದಸ್ಯ ಶೈಲೇಶ್ ಕುಮಾರ್ ನಿರೂಪಿಸಿದರು. ಬಳಿಕ ನೋಂದಣಿ ಕಾರ್ಯಕ್ರಮ ನಡೆದು ಆಯುಷ್ಮಾನ್ ಕಾರ್ಡ್ ಸ್ಥಳದಲ್ಲಿ ವಿತರಿಸಲಾಯಿತು.

Edited By : PublicNext Desk
Kshetra Samachara

Kshetra Samachara

12/06/2022 11:19 am

Cinque Terre

4.2 K

Cinque Terre

0