ಉಡುಪಿ: ಸೇನೆಗೆ ಸೇರಲಿಚ್ಛಿಸುವ ಆಸಕ್ತರಿಗೆ ಪೂರ್ವ ತರಬೇತಿ ನೀಡುವ ನಿಟ್ಟಿನಲ್ಲಿ ಹಿಂದುಳಿದ ವರ್ಗಗಳ ಇಲಾಖೆಯಿಂದ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸೇನಾ ಆಯ್ಕೆ ಪೂರ್ವ ತರಬೇತಿ ಸಂಸ್ಥೆಗಳನ್ನು ಆರಂಭಿಸಲಾಗುವುದು ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದವರ್ಗಗಳ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯ ಸೇನಾ ಆಯ್ಕೆ ಪೂರ್ವ ತರಬೇತಿ ಸಂಸ್ಥೆಗೆ 'ಕೋಟಿ ಚೆನ್ನಯ್ಯ', ದ.ಕ. ಜಿಲ್ಲೆಯ ಸಂಸ್ಥೆಗೆ 'ರಾಣಿ ಅಬ್ಬಕ್ಕ' ಮತ್ತು ಉತ್ತರ ಕನ್ನಡ ಜಿಲ್ಲೆಯ ಸಂಸ್ಥೆಗೆ ಸ್ವಾತಂತ್ರ್ಯ ಯೋಧ 'ಹಿಂಜಾ ನಾಯ್ಕ' ಹೆಸರಿಡಲು ನಿರ್ಧರಿಸಲಾಗಿದೆ. ಮೊದಲ ಹಂತದಲ್ಲಿ ಯುವಕರಿಗೆ ಮಾತ್ರ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಆರು ತಿಂಗಳ ಅವಧಿ ಕೋರ್ಸ್ ಆಗಿದ್ದು, ಒಂದು ವರ್ಷದಲ್ಲಿ ತಲಾ 50 ರಂತೆ ಒಟ್ಟು 100 ಮಂದಿಗೆ ತರಬೇತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
Kshetra Samachara
08/06/2022 12:33 pm