ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಠ್ಯಪುಸ್ತಕದ ಭೂತ ಕಾಂಗ್ರೆಸ್ ನ ಸೃಷ್ಟಿ : ಚರ್ಚೆಗೆ ಬನ್ನಿ ಕೋಟ ಶ್ರೀನಿವಾಸ್ ಪೂಜಾರಿ!

ಉಡುಪಿ: ಪಠ್ಯಪುಸ್ತಕ ಪರಿಷ್ಕರಣೆ ಚರ್ಚೆ ವಿಚಾರವಾಗಿ ಉಡುಪಿಯಲ್ಲಿ ಮಾತನಾಡಿದ ಸಚಿವ ಕೋಟ ಶ್ರೀನಿವಾಸ್ ಪೂಜಾರಿ,ಕಾಂಗ್ರೆಸ್ ಪಠ್ಯಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸುಳ್ಳಿನ ಮೇಲೆ ಕುಳಿತು ಸವಾರಿ ಮಾಡುತ್ತಿದೆ.ಪರಿಷ್ಕರಣೆ ಮತ್ತು ಬದಲಾವಣೆಯ ಬಗ್ಗೆ ಚರ್ಚೆ ಮಾಡೋಣ ಬನ್ನಿ ಎಂದು ಸವಾಲು ಹಾಕಿದ್ದಾರೆ.

ಮಾಧ್ಯಮದ ಜೊತೆ ಮಾತನಾಡಿದ ಸಚಿವರು,ಪಠ್ಯದ ಮೂಲಕ ರಾಷ್ಟ್ರಪ್ರೇಮವನ್ನು ತುಂಬಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಗಿತ್ತು ಎಂದ ಅವರು,ಈ ಹಂತದಲ್ಲೇ ಕಾಂಗ್ರೆಸ್ ಅಪಪ್ರಚಾರವನ್ನು ಶುರುಮಾಡಿದೆ.

ಈ ಹಿಂದೆ ಪ್ರಶಸ್ತಿ ವಾಪ್ಸಿ ಎಂಬ ಅಭಿಯಾನವನ್ನು ಶುರುಮಾಡಿದರು.ಯಾರು ಕೂಡ ಪ್ರಶಸ್ತಿ ವಾಪಸ್ ಕೊಟ್ಟಿಲ್ಲ.ಪಠ್ಯವೇ ಇಲ್ಲದವರು ನಮ್ಮ ಪಠ್ಯವನ್ನು ವಾಪಾಸ್ ತೆಗೆಯಿರಿ ಎನ್ನುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದ್ದಾರೆ.

ದೇವನೂರು ಮಹಾದೇವ ಒಳ್ಳೆಯ ಸಾಹಿತಿ ,ಅವರ ವಿಚಾರ ಬೇಧ ಇರಬಹುದು ಎಂದ ಸಚಿವರು,ದೇವನೂರು ಬಳಿ ಶಿಕ್ಷಣ ಸಚಿವರು ಹೋಗಿ ಮಾತುಕತೆ ಮಾಡಿದ್ದಾರೆ.

ರಾಷ್ಟ್ರಪ್ರೇಮ ತುಂಬಿಸುವ ಕೆಲಸ ಮಾಡುತ್ತಿದ್ದೇವೆ ಎಂದು ದೇವನೂರು ಅವರಿಗೆ ಮನವರಿಕೆ ಮಾಡಲಾಗಿದೆ ಎಂದು ಹೇಳಿದರು.

ಬರಗೂರು, ಚಕ್ರತೀರ್ಥ ಸಮಿತಿ ಪಠ್ಯಗಳ ಸೇರ್ಪಡೆ ಮತ್ತು ಬದಲಾವಣೆಗಳ ಪಟ್ಟಿ ಮಾಡುತ್ತಿದ್ದೇವೆ.ರಾಷ್ಟ್ರಪ್ರೇಮ ಹೆಚ್ಚಿಸಲು ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದೆ.ಇದನ್ನು ರಾಜ್ಯದ ಆರೂವರೆ ಕೋಟಿ ಜನಕ್ಕೆ ಮನವರಿಕೆ ಮಾಡುತ್ತೇವೆ ಎಂದರು.

ಪಿ ಯು ಪಠ್ಯಪುಸ್ತಕ ಪರಿಷ್ಕರಣೆ ಕೈಬಿಟ್ಟಿಲ್ಲ ಮುಂದೂಡಿದ್ದೇವೆ ಎಂದ ಸಚಿವರು ,ಜನತೆಗೆ ಮನವರಿಕೆ ಮಾಡುವ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ.

ಟೀಕೆಗಳು ಬಂದಂತಹ ಸಂದರ್ಭದಲ್ಲಿ ಪರಿಶೀಲನೆ ಮಾಡುತ್ತೇವೆ.ಯಾರು ಕೂಡ ಸರ್ವಾಧಿಕಾರಿಗಳ ಆಗಲು ಸಾಧ್ಯವಿಲ್ಲ.ನಿಮ್ಮ ಟೀಕೆಯಲ್ಲಿ ನ್ಯಾಯ ವಿದ್ದರೆ ನಾವು ಸರಿಪಡಿಸುತ್ತೇವೆ. ಪಠ್ಯಪುಸ್ತಕದ ಭೂತ ಕಾಂಗ್ರೆಸ್ ನ ಸೃಷ್ಟಿ ಎಂದು ವಾಗ್ದಾಳಿ ಮಾಡಿದ್ದಾರೆ.

Edited By : Manjunath H D
Kshetra Samachara

Kshetra Samachara

07/06/2022 06:49 pm

Cinque Terre

5.54 K

Cinque Terre

3

ಸಂಬಂಧಿತ ಸುದ್ದಿ