ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಮೀನುಗಾರರಿಗೆ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ನೀಡುವುದನ್ನು ಖಂಡಿಸಿ ಪ್ರತಿಭಟನೆ!

ಉಡುಪಿ: ಮೀನುಗಾರರಿಗೆ ಪರಿಶಿಷ್ಟ ಜಾತಿಯ ನಕಲಿ ಮೊಗೇರ ಪ್ರಮಾಣಪತ್ರ ನೀಡುವುದನ್ನು ಖಂಡಿಸಿ ಉಡುಪಿ ಜಿಲ್ಲಾ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಹಾಗೂ ಮೊಗೇರ ಮತ್ತು ದಲಿತ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಪ್ರತಿಭಟನಾ ಜಾಥ ಹಾಗೂ ಬಹಿರಂಗ ಸಭೆ ನಡೆಯಿತು.

ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಪ್ರತಿಭಟನಾ ಜಾಥಕ್ಕೆ ಮುಗ್ಗೇರ ಸಂಘಟನೆಯ ಜಿಲ್ಲಾಧ್ಯಕ್ಷ ಅಪ್ಪು ಮರ್ಣೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ಜಾಥವು ನಗರದ ವಿವಿಧ ಮಾರ್ಗಗಳಲ್ಲಿ ಸಂಚರಿಸಿ, ತಾಲೂಕು ಕಚೇರಿ ಮುಂದೆ ಸಮಾಪ್ತಿಗೊಂಡಿತು.

ಬಳಿಕ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ರಾಜ್ಯ ಮುಗ್ಗೇರ ಸಂಘಟನೆ ಉಪಾಧ್ಯಕ್ಷ ಸೀತಾರಾಮ ಕೊಂಚಾಡಿ, ಅವಿಭಜಿತ ದ.ಕ. ಜಿಲ್ಲೆಯ ಮುಗೇರರು 1956 ರಿಂದ ಮೀಸಲಾತಿ ಸೌಲಭ್ಯವನ್ನು ಪಡೆದು ತಮ್ಮದೇ ಬದುಕನ್ನು ಕಟ್ಟಿಕೊಂಡು, ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಮುಂದು ವರೆದಿದ್ದರು.ಇವರು ಬೇರೆ ಜಿಲ್ಲೆಗೆ ವಲಸೆ ಹೋದಲ್ಲಿ ಅಲ್ಲಿಯೂ ಮೀಸಲಾತಿ ಸೌಲಭ್ಯವನ್ನು ಪಡೆಯುವ ಉದ್ದೇಶದಿಂದ ಕೇಂದ್ರ ಸರಕಾರ 1976 ರಲ್ಲಿ ಕ್ಷೇತ್ರ ನಿರ್ಬಂಧನೆಯನ್ನು ರದ್ದುಪಡಿಸಿತು ಎಂದು ತಿಳಿಸಿದರು.

ಇದರ ದುರ್ಲಾಭವನ್ನು ಪಡೆದು ಉತ್ತರ ಕನ್ನಡ ಜಿಲ್ಲೆಯ ಮೀನುಗಾರ ಮೊಗೇರರು ಸುಳ್ಳು ದಾಖಲೆಯನ್ನು ನೀಡಿ ಸರಕಾರವನ್ನು ದಿಕ್ಕು ತಪ್ಪಿಸಿ ಎಸ್ಸಿ ಪ್ರಮಾಣಪತ್ರವನ್ನು ಪಡೆದುಕೊಂಡರು. ಅಲ್ಲಿಂದ ಇದು ಇಡೀ ಉ.ಕ. ಜಿಲ್ಲೆಗೆ ಹಬ್ಬಿ ಪರಿಶಿಷ್ಟರ ಎಲ್ಲ ಸೌಲಭ್ಯವನ್ನು ಕಬಳಿಸಿಕೊಳ್ಳಲಾಯಿತು. ಇದು ಕಳೆದ 35 ವರ್ಷಗಳಲ್ಲಿ ಸಂವಿಧಾನ ಮತ್ತು ದೇಶದ ಮೀಸಲಾತಿ ಕಾನೂನಿಗೆ ಮಾಡಿದ ದ್ರೋಹ ಮತ್ತು ಅಕ್ಷಮ್ಯ ಅಪರಾಧ ಕೃತ್ಯ ,ತಕ್ಷಣ ಇದನ್ನು ರದ್ದು ಮಾಡಬೇಕು ಎಂದು ಆಗ್ರಹಿಸಿದರು.

Edited By : Manjunath H D
Kshetra Samachara

Kshetra Samachara

07/06/2022 02:20 pm

Cinque Terre

4.87 K

Cinque Terre

0

ಸಂಬಂಧಿತ ಸುದ್ದಿ