ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: 'ಅಮಾಯಕರನ್ನು ಬಂಧಿಸುವ ಪೊಲೀಸರ ನಡೆ ಖಂಡನೀಯ'

ಮಂಗಳೂರು: ಎಸ್‌ಡಿಪಿಐ ಸಮಾವೇಶಕ್ಕೆ ತೆರಳುವ ವೇಳೆ ಪೊಲೀಸರನ್ನು ನಿಂದಿಸಲಾಗಿದೆ ಎಂದು ಆರೋಪಿಸಿ ಸುಮಾರು 10ಕ್ಕೂ ಹೆಚ್ಚು ಎಸ್‌ಡಿಪಿಐ ಕಾರ್ಯಕರ್ತರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿ ನಡೆಸಿರುವ ಎಸ್‌ಡಿಪಿಐ, ಘಟನೆಯಲ್ಲಿ ಹಲವು ಅಮಾಯಕರನ್ನು ಬಂಧಿಸಲಾಗುತ್ತಿದೆ ಎಂದು ಆರೋಪಿಸಿದೆ.

ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರ್, ಪೊಲೀನ್ ನಿಂದನೆ ಘೋಷಣೆ ಖಂಡನೀಯವಾಗಿದ್ದು, ನಾಗರಿಕ ಸಮಾಜ ಒಪ್ಪುವುದಿಲ್ಲ. ಪೊಲೀಸರ ಬಗ್ಗೆ ಎಸ್‌ಡಿಪಿಐ ಗೌರವ ಹೊಂದಿದ್ದು, ವಿಡಿಯೋ ವೈರಲ್ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳನ್ನು ಎಸ್‌ಡಿಪಿಐ ನಾಯಕರು ಸಂಪರ್ಕಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು ಎಂದು ಸ್ಪಷ್ಟನೆ ನೀಡಿದರು.

ಕಳೆದ ತಿಂಗಳು ಮಂಗಳೂರಿನಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಪ್ರಮೋದ್ ಮುತಾಲಿಕ್‌ಗೆ ಪೊಲೀಸ್ ಆಯುಕ್ತರು ರಾಜಾತಿಥ್ಯ ನೀಡಿದ್ದರು. ಇದನ್ನು ಎಸ್‌ಡಿಪಿಐ ನಾಯಕರು ಖಂಡಿಸಿ ಪೋಸ್ಟ್ ಮಾಡಿದ್ದರು. ಆ ಬಳಿಕ ಎಸ್‌ಡಿಪಿಐ ಅನ್ನು ಹತ್ತಿಕ್ಕಲು ಪೊಲೀಸ್ ಇಲಾಖೆ ಮುಂದಾಗಿದೆ. ಇದು ಪೊಲೀಸ್ ಆಯುಕ್ತರಿಗೆ ಶೋಭೆ ತರುವುದಿಲ್ಲ ಎಂದು ಸಾದಾತ್ ಹೇಳಿದರು.

ಘಟನೆಯಲ್ಲಿ ಹಲವು ಅಮಾಯಕರನ್ನು ಬಂಧಿಸಲಾಗುತ್ತಿದ್ದು, ಕೆಲವೇ ಜನರು ಮಾಡಿದ ತಪ್ಪಿಗೆ ಹಲವರನ್ನು ಬಂಧಿಸಲಾಗಿದೆ. ಸಮಾವೇಶದಲ್ಲಿ ಭಾಗವಹಿಸದವರನ್ನೂ ಬಂಧಿಸಲಾಗಿದೆ. ಇದರಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರೂ ಸೇರಿದ್ದಾರೆ. ಬೆಂಗಳೂರು, ಮೈಸೂರಿಗೆ ತೆರಳಿ ಕೆಲವರನ್ನು ಬಂಧಿಸಲಾಗಿದ್ದು, ಈ ವೇಳೆ ಜೊತೆಗಿದ್ದವರನ್ನು ಬಂಧಿಸಲಾಗಿದೆ. ಆಶ್ರಯ ನೀಡಿದ ಆರೋಪದಲ್ಲಿ ರೂಂ ಮೇಟ್‌ಗಳನ್ನೂ ಬಂಧಿಸಲಾಗಿದೆ ಎಂದು ಆರೋಪಿಸಿದರು.

ಸಮಾವೇಶದ ಮುನ್ನವೇ ಘೋಷಣೆ ಕೂಗಿರುವ ವೀಡಿಯೋ ವೈರಲ್ ಆಗಿತ್ತು. ಎಸ್‌ಡಿಪಿಐ ಬೆಳವಣಿಗೆ ಸಹಿಸದೇ ಸಂಘ ಪರಿವಾರದ ಅಣತಿಯಂತೆ ಪೊಲೀಸ್ ಇಲಾಖೆ ವರ್ತಿಸುತ್ತಿದೆ. ಜಗದೀಶ್ ಕಾರಂತ ಈ ಹಿಂದೆ ಹಲವು ಬಾರಿ ಪೊಲೀಸರಿಗೆ, ಡಿಸಿ ಗೆ ಬಹಿರಂಗ ಧಮ್ಕಿ ಹಾಕಿದ್ದರು. ಆದರೆ ಕಾರಂತ ಬಂಧಿಸಲು ಇಲ್ಲಿನ ಪೊಲೀಸರಿಗೆ ಸಾಧ್ಯವಾಗಿಲ್ಲ ಎಂದು ಅನ್ವರ್ ಸಾದಾತ್ ಹೇಳಿದರು.

ಎಸ್‌ಡಿಪಿಐ ಕಾನೂನಾತ್ಮಕ ಹೋರಾಟ: ಅಮಾಯಕರನ್ನು ಬಂಧಿಸಿದ ಪೊಲೀಸರ ವಿರುದ್ಧ ಎಸ್‌ಡಿಪಿಐ ಕಾನೂನಾತ್ಮಕ ಹೋರಾಟ ನಡೆಸಲಿದೆ. ಅಲ್ಲದೆ, ಮಾನವ ಹಕ್ಕು ಆಯೋಗಕ್ಕೂ ಎಸ್‌ಡಿಪಿಐ ದೂರು ನೀಡಲಿದೆ ಎಂದು ಅನ್ವರ್ ಸಾದಾತ್ ಹೇಳಿದರು. ಘೋಷಣೆ ಕೂಗಿದವರನ್ನು ಆರೋಪಿಗಳೆಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಘಟನೆ ಸಂಬಂಧಪಡದವರನ್ನು ಬಂಧಿಸಲಾಗಿದೆ. ಸಂಘ ಪರಿವಾರವರನ್ನು ತೃಪ್ತಿ ಪಡಿಸಲು ಈ ರೀತಿ ಮಾಡಲಾಗಿದೆ. ಇದರ ಹಿಂದೆ ಇಲ್ಲಿನ ಶಾಸಕ, ಸಂಸದರ ಕೈವಾಡವೂ ಇದೆ ಅವರು ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಎಸ್.ಡಿ.ಪಿ.ಐ. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಅಬೂಬಕ್ಕರ್ ಕುಳಾಯಿ, ಜಿಲ್ಲಾ ಕಾರ್ಯದರ್ಶಿ ಅಕ್ಬರ್ ಬೆಳ್ತಂಗಡಿ, ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇರ್ಷಾದ್ ಅಜ್ಜಿನಡ್ಕ ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

01/06/2022 10:04 pm

Cinque Terre

5.52 K

Cinque Terre

1

ಸಂಬಂಧಿತ ಸುದ್ದಿ