ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಪಠ್ಯದಲ್ಲಿದ್ದ ಕಥೆ ,ಕವನ ಹಿಂಪಡೆದ ಸಾಹಿತಿಗಳ ಜೊತೆ ಮಾತನಾಡುತ್ತೇನೆ: ಸಿಎಂ

ಮಣಿಪಾಲ: ಪಠ್ಯಪುಸ್ತಕಗಳಲ್ಲಿರುವ ತಮ್ಮ ಕಥೆ ,ಕವನಗಳನ್ನು ಸಾಹಿತಿಗಳು ಬುದ್ಧಿಜೀವಿಗಳು ವಾಪಸ್ ಪಡೆಯುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ,ಅವರ ಜೊತೆ ಮಾತನಾಡುತ್ತೇನೆ ಎಂದು ಹೇಳಿದ್ದಾರೆ.

ನಾನು ಕೂಡ ಅವರ ಜೊತೆ ಮಾತನಾಡುತ್ತೇನೆ.ನಮ್ಮ ನಿರ್ಧಾರ ಹೇಳುತ್ತೇವೆ.ಬಳಿಕ ಅವರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಉಡುಪಿಯ ಬಿ.ಆರ್ ಶೆಟ್ಟಿ ಆಸ್ಪತ್ರೆ ಉದ್ಯೋಗಿಗಳ ಸಂಬಳ ಸಮಸ್ಯೆಗಳ ಕುರಿತು ನನ್ನ ಗಮನಕ್ಕೆ ಬಂದಿದೆ. ಉದ್ಯೋಗಿಗಳ ಸಂಬಳವನ್ನು ಶೀಘ್ರ ಬಿಡುಗಡೆ ಮಾಡಿ ಅವರಿಗೆ ಪಾವತಿ ಮಾಡಲಾಗುವುದು ಎಂದು ಹೇಳಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಲವ್ ಜಿಹಾದ್ ಪ್ರಕರಣಗಳು ಈಗ ಶುರುವಾದದ್ದಲ್ಲ.ಹಿಂದಿನಿಂದಲೂ ಇತ್ತು. ಸರಕಾರ ಈಗಾಗಲೇ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ತಪ್ಪಿತಸ್ಥರನ್ನು ಹಾಗೆ ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಪೊಲೀಸರು ಅಂಥವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುತ್ತಾರೆ.

ಬಿಜೆಪಿ ಸರ್ಕಾರ ಬಂದರೆ ಲೋಕಾಯುಕ್ತವನ್ನು ಬಲಪಡಿಸುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದು, ಆದರೆ ಆ ಕಾರ್ಯ ಇನ್ನೂ ಆಗಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಾನೂನಾತ್ಮಕವಾಗಿ ಎಸಿಬಿಯನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡಿದ್ದೇವೆ. ಲೋಕಾಯುಕ್ತ ಕೂಡ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿದೆ ಎಂದರು.

Edited By : Manjunath H D
Kshetra Samachara

Kshetra Samachara

01/06/2022 12:58 pm

Cinque Terre

5.42 K

Cinque Terre

0

ಸಂಬಂಧಿತ ಸುದ್ದಿ