ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ರೈತ ನಾಯಕ ಟಿಕಾಯತ್ ಮುಖಕ್ಕೆ ಮಸಿ ಬಳಿದದ್ದು ಸರಿಯಲ್ಲ

ಉಡುಪಿ: ರೈತ ನಾಯಕ ಟಿಕಾಯತ್ ಮೇಲೆ ನಿನ್ನೆ ಬೆಂಗಳೂರಿನಲ್ಲಿ ಮಸಿ ಬಳಿದದ್ದು ಸರಿಯಲ್ಲ. ಯಾವುದೇ ಹೋರಾಟಗಾರರ ಮೇಲೆ ಈ ರೀತಿ ಮಾಡುವುದು ಸರಿಯಲ್ಲ ಎಂದು ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಣಿಪಾಲದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ,ಪ್ರಜಾತಂತ್ರದಲ್ಲಿ ಹೋರಾಟಕ್ಕೆ ಬಲವಿದೆ.ಲೋಕಸಭೆ ರಾಜ್ಯಸಭೆ ವಿಧಾನಸಭೆ ವಿಧಾನ ಪರಿಷತ್ ಗಳಲ್ಲಿ ಪ್ರತಿಪಕ್ಷಕ್ಕೆ ದೊಡ್ಡ ತಾಕತ್ತು ಇದೆ.ಸರಕಾರದ ಲೋಪದೋಷಗಳನ್ನು ಸರಿಪಡಿಸಿ ಎಚ್ಚರಗೊಳಿಸುವ ಕೆಲಸ ಹೋರಾಟದಿಂದಲೇ ಸಾಧ್ಯ. ಟಿಕಾಯತ್ ತನ್ನದೇ ಒಂದು ವಿಚಾರ ಇಟ್ಟು ಹೋರಾಟ ನಡೆಸುತ್ತಿದ್ದಾರೆ.

ಅದರಿಂದ ರೈತರಿಗೆ ಎಷ್ಟು ಲಾಭ ಆಯ್ತು ನಷ್ಟ ಆಯ್ತು ? ಅನ್ನೋದನ್ನು ಅವರೇ ಅವಲೋಕನ ಮಾಡಲಿ.ಆದರೆ ಯಾವುದೇ ವ್ಯಕ್ತಿಯ ಮೇಲೆ ಈ ರೀತಿ ವೈಯಕ್ತಿಕ ದ್ವೇಷ ಕಾರುವುದು ಸರಿಯಲ್ಲ. ಮಸಿ ಬಳಿಯುವ ಕೆಲಸ ಯಾರು ಕೂಡ ಮಾಡಬಾರದು, ಶೋಭೆ ತರುವಂತದ್ದಲ್ಲ ಎಂದು ಸಚಿವೆ ಹೇಳಿದ್ದಾರೆ.

Edited By : Manjunath H D
PublicNext

PublicNext

31/05/2022 12:32 pm

Cinque Terre

22.74 K

Cinque Terre

1

ಸಂಬಂಧಿತ ಸುದ್ದಿ