ಬಂಟ್ವಾಳ: ಮಳಲಿಯಲ್ಲಿ ಮಸೀದಿಯಲ್ಲಿ ದೇವಸ್ಥಾನದ ಕುರುಹುಗಳು ಸಿಕ್ಕದ್ದು ಹಾಗೂ ತಾಂಬೂಲ ಪ್ರಶ್ನೆಯಲ್ಲಿ ದೇವಸ್ಥಾನ ಇದೆ ಎಂದು ಕಂಡುಬಂದಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ರಾಜಕೀಯ ಮಧ್ಯಪ್ರವೇಶದಿಂದ ಸಮಸ್ಯೆಯಾಗುವುದಷ್ಟೇ ಹೊರತು, ವಿಗ್ರಹಾರಾಧನೆ ಆದ ಜಾಗವಾಗಿರುವ ಕಾರಣ ಅದನ್ನು ನಮಗೆ ನೀಡಿ ಎಂದು ಕೇಳುತ್ತಿದ್ದೇವೆ ಎಂದು ಕಲ್ಲಡ್ಕದಲ್ಲಿ ಡಾ. ಪ್ರಭಾಕರ ಭಟ್ ಹೇಳಿದ್ದಾರೆ.
ಸೌಹಾರ್ದಯುತವಾಗಿ ಮುಸ್ಲಿಮರೇ ಅದನ್ನು ಕೊಟ್ಟರೆ, ಬೇರೆ ಜಾಗದಲ್ಲಿ ಮಸೀದಿ ನಿರ್ಮಾಣಕ್ಕೆ ಜಾಗ ಕೊಡಬಹುದು. ಅದರಿಂದ ಒಟ್ಟಿಗೆ ಬದುಕಲು ಆಗುತ್ತದೆ ಎಂದು ಕಲ್ಲಡ್ಕದಲ್ಲಿ ಆರ್ ಎಸ್ ಎಸ್ ಮುಖಂಡ ಡಾ. ಪ್ರಭಾಕರ ಭಟ್ ಹೇಳಿದರು.
ನಾವು ಅಲ್ಲಾನ ವಿರೋಧಿಯಲ್ಲ, ಏಸುವಿನ ವಿರೋಧಿಯಲ್ಲ, ಮುಸಲ್ಮಾನ ವಿರೋಧಿಯಲ್ಲ, ಎಲ್ಲ ಮಸೀದಿಯನ್ನು ನಾವು ಕೇಳುತ್ತಿಲ್ಲ, ಅಲ್ಲಿ ದೇವಸ್ಥಾನದ ಕುರುಹುಗಳು ಕಂಡ ಕಾರಣ ಕೇಳುತ್ತಿದ್ದೇವೆ ಎಂದು ಹೇಳಿದರು.
Kshetra Samachara
30/05/2022 07:39 pm