ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ವಾರ್ಡುಗಳಿಗೆ ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಕಾಂಗ್ರೆಸ್ ಸದಸ್ಯರ ಪ್ರತಿಭಟನೆ

ಮೂಡುಬಿದಿರೆ: ಮೂರು ತಿಂಗಳಿನಿಂದ ನಡೆಯದ ಪುರಸಭಾಧೀವೇಶನ ಮತ್ತು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿರುವ ಪುರಸಭಾ ಅಧ್ಯಕ್ಷರ ವಿರುದ್ಧ ಕಾಂಗ್ರೆಸ್ ಬೆಂಬಲಿತ 11 ಮಂದಿ ಸದಸ್ಯರು ಸೋಮವಾರ ಪುರಸಭಾ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಹಿರಿಯ ಸದಸ್ಯ ಪಿ.ಕೆ.ಥೋಮಸ್, ರಾಜ್ಯ ಸರಕಾರದಿಂದ ಮೂಡುಬಿದಿರೆ ಪುರಸಭಾ ನಿಧಿಗೆ ಬಂದಿರುವ ಸುಮಾರು 10 ಕೋಟಿ ಅನುದಾನವನ್ನು ಎಲ್ಲಾ 23 ವಾರ್ಡಿಗೆ ನೀಡದೇ ಬಿಜೆಪಿ ವಾರ್ಡಿನ ಸದಸ್ಯರ ವಾರ್ಡಿಗೆ ಮಾತ್ರ ಹಂಚಿಕೆ ಮಾಡಿ ತಾರತಮ್ಯ ಮಾಡಿದ್ದಾರೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಪುರಸಭೆಯಲ್ಲಿ ಮಾಸಿಕ ಕಡ್ಡಾಯವಾಗಿರುವಂತಹ ಸಾಮಾನ್ಯ ಸಭೆಯನ್ನು ನಡೆಸದೇ 2,3 ತಿಂಗಳುಗಳೇ ಕಳೆದಿದೆ ಮಳೆಗಾಲದ ಸಮಯದಲ್ಲಿ ತುರ್ತಾಗಿ ಆಗಬೇಕಾಗಿರುವ ಕಾಮಗಾರಿಗಳು ಸಮಸ್ಯೆಯಲ್ಲಿದೆ ಎಂದರು.

ಮೂಡುಬಿದಿರೆ ಪುರಸಭೆಯು ಈ ವರುಷದಲ್ಲಿ ತೆರಿಗೆ, ನೀರಿನ ಹಣ ಪರವಾನಿಗೆಯನ್ನೆಲ್ಲಾ ಹೆಚ್ಚಿಸಿಕೊಂಡು ಜನರಿಗೆ ತೊಂದರೆಯನ್ನು ನೀಡುತ್ತಿದ್ದಾರೆ. ಅಷ್ಟೇ ಅಲ್ಲದೇ ಮೂಡುಬಿದಿರೆ ಪುರಸಭೆಯಲ್ಲಿ ಘನತ್ಯಾಜ್ಯ ವಿಲೇವಾರಿಯನ್ನು ಅಚ್ಚುಕಟ್ಟಾಗಿ ಮಾಡುತ್ತಿಲ್ಲ ಎಂದು ಕಿಡಿಕಾರಿದರು.

ಕೇವಲ ಛಾಯಾಚಿತ್ರಕ್ಕಾಗಿ ಬ್ಯಾನರ್, ಸಣ್ಣ ಸಣ್ಣ ಕಾರ್ಯಕ್ರಮಗಳನ್ನು ಆಯೋಜಿಸಿ ಸ್ವಚ್ಛತೆಯಾಗಿದೆ ಎಂಬ ವಿಚಾರವನ್ನು ಸುದ್ದಿ ಪತ್ರಿಕೆಗಳಲ್ಲಿ ಮಾತ್ರ ಕಾಣದೇ ನೇರವಾಗಿ ಕೂಲಂಕಷವಾಗಿ ವೀಕ್ಷಿಸಿದಾಗ ಸಮಸ್ಯೆಯನ್ನು ಅರಿಯಬಹುದು. 2 ವರುಷದಿಂದ ಘನತ್ಯಾಜ್ಯ ವಿಲೇವಾರಿಯು ಸಂಪೂರ್ಣವಾಗಿ ಕೆಟ್ಟು ಹೋಗಿದ್ದು, ಯಾವುದೇ ಕೆಲಸಗಳು ಎಚ್ಚರಿಕೆಯಿಂದ ನಡೆಯುತ್ತಿಲ್ಲ ಎಂದು ಆಪಾದಿಸಿದರು

Edited By : Manjunath H D
Kshetra Samachara

Kshetra Samachara

23/05/2022 08:40 pm

Cinque Terre

22.02 K

Cinque Terre

2