ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಪು: "ಜ್ಞಾನ ವಾಪಿ ಮಸೀದಿಯ ವಿರುದ್ಧ ಷಡ್ಯಂತ್ರ ನಡೆದಿದೆ" ಎಸ್ ಡಿಪಿಐ ಪ್ರತಿಭಟನೆ

ಕಾಪು : ಜ್ಞಾನ ವಾಪಿ ಮಸೀದಿಯ ವಿರುದ್ಧದ ಷಡ್ಯಂತ್ರವನ್ನು ಖಂಡಿಸಿ ಮತ್ತು 1991 ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( SDPI ) ಕಾಪು ಕ್ಷೇತ್ರ ಸಮಿತಿ ವತಿಯಿಂದ ಇಂದು ಕಾಪು ಬಸ್ ನಿಲ್ದಾಣ ನಲ್ಲಿ ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಎಸ್ ಡಿಪಿಐ ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಹನಿಫ್ ಮೂಳೂರು ದೇಶದಲ್ಲಿ ಮಂದಿರ ಮಸೀದಿ ಹೆಸರಿನಲ್ಲಿ ಬಿಜೆಪಿ ಹಾಗೂ ಸಂಘಪರಿವಾರ ನಡೆಸುತ್ತಿರುವ ಸಮಾಜ ವಿರೋಧಿ, ದೇಶ ವಿರೋಧಿ ರಾಜಕಾರಣದ ವಿರುದ್ಧವಾಗಿ 1991 ರ ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಬಾಬರೀ ಮಸೀದಿ ಹೊರತು ಪಡಿಸಿ ಉಳಿದ ಎಲ್ಲಾ ಮಂದಿರ, ಮಸೀದಿಗಳ ವಿಷಗಳಲ್ಲಿ 1947 ರಲ್ಲಿದ್ದ ಹಾಗೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ಹೇಳಲಾಗಿದೆ. ಹೀಗಿದ್ದರೂ ಇದನ್ನು ಮರೆಮಾಚಿ ಜ್ಞಾನ ವಾಪಿ ಮಸೀದಿಯ ಕೊಳದ ಕಾರಂಜಿಯನ್ನು ಶಿವಲಿಂಗ ಎಂದು ಬಿಂಬಿಸಿ ರಾಜಕೀಯ ಲಾಭ ಪಡೆಯಲು ಯತ್ನಿಸಲಾಗುತ್ತಿದೆ ಎಂದರು.

ಜ್ಞಾನ ವಾಪಿ ಮಸೀದಿ ವಿರುದ್ಧದ ಷಡ್ಯಂತ್ರ ಖಂಡಿಸಿ ಎಸ್ ಡಿಪಿಐ ಇಂದು ದೇಶಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಮಸೀದಿಯ ಸಂರಕ್ಷಣೆಗೆ ಪಕ್ಷ ಕಟಿಬದ್ಧವಾಗಿದ್ದು ಕಾನೂನು ಹೋರಾಟದ ಜೊತೆಗೆ ಬೀದಿ ಹೋರಾಟವನ್ನೂ ನಡೆಸಲಿದೆ ಎಂದರು. ಸಭೆಯನ್ನುದ್ದೇಶಿಸಿ ಕಾಪು ಪುರಸಭೆ ಸದಸ್ಯ ನೂರುದ್ದೀನ್ ಮಾತನಾಡಿದರು.

ಪ್ರತಿಭಟನೆಯಲ್ಲಿ ಮಜಿದ್ ಉಚ್ಚಿಲ ಸದಸ್ಯರು ಎಸ್ ಡಿಪಿಐ ಉಡುಪಿ ಜಿಲ್ಲಾ ಸಮಿತಿ, ಅಯೂಬ್ ಇಂಜಿನಿಯರ್ ಮಣಿಪುರ ಕಾರ್ಯದರ್ಶಿ ಎಸ್ ಡಿಪಿಐ ಕಾಪು ವಿಧಾನಸಭಾ ಕ್ಷೇತ್ರ ,ರಜಾಕ್ ವೈ ಸಿ ಉಚ್ಚಿಲ, ಅಬ್ದುಲ್ ಖಾದರ್ ಮಲ್ಲಾರ್ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/05/2022 07:07 pm

Cinque Terre

3.65 K

Cinque Terre

0

ಸಂಬಂಧಿತ ಸುದ್ದಿ