ಮಂಗಳೂರು: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಪೆನ್, ಪುಸ್ತಕ ಕೊಡುವ ಬದಲು ರೈಫಲ್ ಟ್ರೈನಿಂಗ್ ಮಾಡಲಾಗಿದೆ. ಶಾಸಕರೇ ಮುಂದೆ ನಿಂತು ಮಾಡಿರೋ ಸರ್ಕಾರದ ತಾಲಿಬಾನ್ ಸಂಸ್ಕೃತಿ ತೋರಿಸ್ತಿದೆ. ಸರ್ಕಾರ ಗೂಂಡಾಗಿರಿ ಮಾಡಲು ಹೊರಗುತ್ತಿಗೆ ಕೊಟ್ಟಂತಿದೆ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎನ್ ಸಿಸಿ ರೀತಿಯ ಸಂಸ್ಥೆಗಳು ಅಧಿಕೃತ. ಅವರು ದೇಶ ಸೇವೆಗಾಗಿ ತರಬೇತಿ ಕೊಡುತ್ತಾರೆ. ಆದರೆ ಕೊಡಗಿನಲ್ಲಿ ರೈಫಲ್ ಟ್ರೈನಿಂಗ್ ಗೆ ಅನುಮತಿ ಕೊಟ್ಟಿದ್ದು ಎಂಬುದರ ಬಗ್ಗೆ ತನಿಖೆ ಆಗಲಿ. ವಿದ್ಯಾಸಂಸ್ಥೆಗಳಲ್ಲಿ ಶಸ್ತ್ರಾಸ್ತ್ರ ತರಬೇತಿಗೆ ಅವಕಾಶ ಕೊಟ್ಟಿರೋದು ಸರ್ಕಾರದ ನಿರ್ಲಕ್ಷ್ಯ.
ಗೃಹ ಸಚಿವರು ಮತ್ತು ಶಿಕ್ಷಣ ಸಚಿವರು ಈ ಬಗ್ಗೆ ಜನರಿಗೆ ಉತ್ತರಿಸಲಿ. ಈ ವಿಚಾರದಲ್ಲಿ ಮುಖ್ಯಮಂತ್ರಿ ಕೂಡ ಮೌನವಾಗಿರೋದು ಸರಿಯಲ್ಲ. ಗನ್ ಹಿಡಿದುಕೊಂಡು ಸುತ್ತಾಡಲಿಕ್ಕೆ ಇದೇನು ಉತ್ತರ ಪ್ರದೇಶನಾ? ದೇಶದ ಭವಿಷ್ಯ ಮಕ್ಕಳು, ಮಕ್ಕಳಲ್ಲಿ ದ್ವೇಷದ ವಾತಾವರಣ ಬೇಡ ಎಂದರು.
ಇನ್ನು ಮುಸ್ಲಿಮರ ಮತ ಬೇಡ, ಹಿಂದೂಗಳ ಮತ ಸಾಕು ಎಂಬ ಶಾಸಕ ಹರೀಶ್ ಪೂಂಜಾ ಹೇಳಿಕೆ ವಿಚಾರವಾಗಿ ಮಾತನಾಡಿದ ಖಾದರ್ ಬೆಳ್ತಂಗಡಿ ಶಾಸಕರ ಅಪ್ರಬುದ್ದ ಮಾತು, ಅದೊಂದು ಕೀಳು ರಾಜಕೀಯ. ಅದಕ್ಕೆ ನಾನು ಉತ್ತರ ಕೊಡಲ್ಲ, ಅದಕ್ಕೆ ಬೆಳ್ತಂಗಡಿ ಜನ ಉತ್ತರ ಕೊಡ್ತಾರೆ.
ಮತ ಕೊಟ್ಟ ಜನರಿಗಾದರೂ ಮೊದಲು ಇವರು ಕೆಲಸ ಮಾಡಲಿ. ಬೆಳ್ತಂಗಡಿಯ ಎಂಡೋಸಲ್ಫಾನ್ ಪೀಡಿತರಿಗೆ ಶಾಸಕರು ಏನು ಮಾಡಿದರು?ಮೊದಲು ಎಂಡೋಸಲ್ಫಾನ್ ಪೀಡಿತರಿಗೆ ಸಹಾಯ ಮಾಡಲಿ, ಅದು ಬಿಟ್ಟು ಬೇರೆ ಅಲ್ಲ ಆಕ್ರೋಶ ವ್ಯಕ್ತಪಡಿಸಿದರು.
PublicNext
17/05/2022 05:54 pm