ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶಾಲೆಗಳಲ್ಲಿ ರೈಫಲ್ ತರಬೇತಿ ರಾಜ್ಯ ಸರಕಾರದ ತಾಲಿಬಾನ್ ಸಂಸ್ಕೃತಿಯನ್ನು ಬಿಂಬಿಸುತ್ತದೆ

ಮಂಗಳೂರು: ಶಾಲಾ ವಿದ್ಯಾರ್ಥಿಗಳ ಕೈಗಳಿಗೆ ಶಾಸಕರೇ ಮುಂದೆ ನಿಂತು ರೈಫಲ್ ತರಬೇತಿ ನೀಡಿರೋದು, ಆಯುಧಗಳನ್ನು ನೀಡುವುದು ರಾಜ್ಯ ಸರಕಾರದ ತಾಲಿಬಾನ್ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ವಿಧಾನಸಭೆಯ ವಿಪಕ್ಷ ಉಪನಾಯಕ ಯು.ಟಿ‌.ಖಾದರ್ ಕಿಡಿಕಾರಿದರು.

ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳೇ ಈ ರೀತಿ ಮಾಡುತ್ತಿರುವಾಗ ರಾಜ್ಯ ಸರಕಾರವೇ ಗೂಂಡಾಗಿರಿಯನ್ನು ಹೊರಗುತ್ತಿಗೆ ನೀಡಿದಂತಾಗಿದೆ. ಆದ್ದರಿಂದ ಗೃಹ ಸಚಿವರು ಹಾಗೂ ಶಿಕ್ಷಣ ಸಚಿವರು ಈ ಬಗ್ಗೆ ರಾಜ್ಯದ ಜನತೆಗೆ ಉತ್ತರ ಕೊಡಬೇಕು ಎಂದು ಹೇಳಿದರು.

ಎನ್ ಸಿಸಿಯಲ್ಲೂ ರೈಫಲ್ ತರಬೇತಿ ಕೊಡಲಾಗುತ್ತದೆ. ಆದರೆ ಎನ್ ಸಿಸಿ ಗೆ ಸರ್ಕಾರದ ಮಾನ್ಯತೆ ಇದೆ.‌ ಅದು ದೇಶಪ್ರೇಮದ ಉದ್ದೇಶ ಆಗಿದೆ. ಆದರೆ ಮಡಿಕೇರಿಯಲ್ಲಿ ಯಾರಿಗೆ ಬೇಕಾದರೂ ರೈಫಲ್ ಟ್ರೈನಿಂಗ್ ಕೊಡಬಹುದಾ?. ಈ ತರಬೇತಿಗೆ ಜಿಲ್ಲಾಧಿಕಾರಿ, ಪೊಲೀಸ್ ಪರ್ಮೀಷನ್ ಇದೆಯೇ. ಸರ್ಕಾರ ಭವಿಷ್ಯದ ಒಳಿತನ್ನು ಗಮನಹರಿಸಿ ನಿರ್ಧಾರ ಕೈಗೊಳ್ಳಬೇಕು‌. ರಾಜ್ಯ ಸರ್ಕಾರ ಈ ಟ್ರೈನಿಂಗ್ ಗೆ ಪರೋಕ್ಷ ಬೆಂಬಲ ನೀಡಿದೆ ಎಂದು ಯುಟಿ ಖಾದರ್ ಹೇಳಿದರು.

Edited By : Manjunath H D
PublicNext

PublicNext

17/05/2022 01:41 pm

Cinque Terre

28.32 K

Cinque Terre

21

ಸಂಬಂಧಿತ ಸುದ್ದಿ