ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಬಿಜೆಪಿ ಟೋಪಿ ಹಾಕಿದ ಪ್ರಮೋದ್, ಮಹಿಳಾ ಕಾರ್ಯಕರ್ತೆಯರ ಜೊತೆ ಫೊಟೋ ಶೂಟ್ !

ಉಡುಪಿ: ಹಲವು ವರ್ಷಗಳ ಕಾಯುವಿಕೆ ಬಳಿಕ ,ಮಾಜಿ ಸಚಿವ ಪ್ರಮೋದ್ ಮದ್ವರಾಜ್‌ರನ್ನು ಬಿಜೆಪಿ ವರಿಷ್ಠರು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಇವತ್ತು ಉಡುಪಿಯಲ್ಲಿ ನಡೆದ ರಾಜ್ಯ ಪದಾಧಿಕಾರಿಗಳ ಸಭೆಯಲ್ಲಿ ಪ್ರಮೋದ್ ಕಾರ್ಯಕರ್ತರ ಕೇಂದ್ರಬಿಂದುವಾದರು. ಪಕ್ಷದ ಹಿರಿ ಕಿರಿಯ ಮುಖಂಡರು ಮಧ್ವರಾಜರ ಕೈ ಕುಲುಕಿದರು. ತಮ್ಮ ಎಂದಿನ ಗತ್ತಿನಲ್ಲಿ ಪ್ರಮೋದ್ ಕೈ ಮುಗಿಯುತ್ತಾ ಎಲ್ಲೆಂದರಲ್ಲಿ ಓಡಾಡಿದರು. ಪ್ರಮೋದ್ ಸಭೆಯಿಂದ ನಿರ್ಗಮಿಸುವಾಗ ಮಹಿಳಾ ಕಾರ್ಯಕರ್ತೆಯರು ಸ್ವಾಗತಿಸಿ ಫೋಟೋಗಾಗಿ ವಿನಂತಿಸಿದರು. ಈ ವೇಳೆ ಕಮಲದ ಟೋಪಿ ಧರಿಸಿದ್ದ ಅವರು ಕಾರ್ಯಕರ್ತೆಯರ ಪಕ್ಕದಲ್ಲೇ ನಿಂತು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.

Edited By :
Kshetra Samachara

Kshetra Samachara

10/05/2022 06:18 pm

Cinque Terre

29.17 K

Cinque Terre

7

ಸಂಬಂಧಿತ ಸುದ್ದಿ