ಉಡುಪಿ: ಇತ್ತೀಚೆಗೆ ಬಿಜೆಪಿ ಮುಖಂಡ ಯತ್ನಾಳ್ ,ಮುಖ್ಯಮಂತ್ರಿ ಸ್ಥಾನಕ್ಕೆ 2500 ಕೋಟಿ ಕೊಡಬೇಕಾಗುತ್ತೆ ಎಂಬ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.
ಉಡುಪಿಗೆ ರಾಜ್ಯ ಪದಾಧಿಕಾರಿಗಳ ಸಭೆಗೆ ಆಗಮಿಸಿದ ಅವರು ಸುದ್ದಿಗಾರರ ಜೊತೆ ಮಾತನಾಡಿದರು. ನಮ್ಮ ಪಕ್ಷದಲ್ಲಿ ಕೇಂದ್ರ ಮತ್ತು ರಾಜ್ಯದ ಶಿಸ್ತು ಸಮಿತಿ ಇದೆ.ಕೇಂದ್ರದ ಶಿಸ್ತು ಸಮಿತಿಗೆ ಅವರ ಹೇಳಿಕೆಯನ್ನು ತಿಳಿಸಿದ್ದೇವೆ.ಕೇಂದ್ರ ಶಿಸ್ತು ಸಮಿತಿಯವರು ಯೋಚನೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಆದರೆ ಯತ್ನಾಳ್ ಮರುದಿನವೇ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ.ತಮ್ಮ ಹೇಳಿಕೆಯ ಬಗ್ಗೆ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ
ಎಂದು ನಳಿನ್ ಹೇಳಿದ್ದಾರೆ.
PublicNext
10/05/2022 01:23 pm