ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಲ್ಪೆ: ಪ್ರಮೋದ್ ಬಿಜೆಪಿ ಎಂಟ್ರಿಯೊಂದಿಗೆ ರಘುಪತಿ ಭಟ್ "ಪಲ್ಟಿ" ವಿಡಿಯೋ ವೈರಲ್ !

ಮಲ್ಪೆ: ಮೊನ್ನೆ ಉಡುಪಿ ಶಾಸಕ ರಘುಪತಿ ಭಟ್, ಮಲ್ಪೆ ಬೀಟ್‌ನಲ್ಲಿ ತೇಲುವ ಸೇತುವೆ ಉದ್ಘಾಟನೆ ವೇಳೆ ಆಯತಪ್ಪಿ ನೀರಿಗೆ ಬಿದ್ದಿದ್ದರು.ಆ ಸಂದರ್ಭದಲ್ಲಿ ಅದನ್ನು ಯಾರೂ ಅಷ್ಟಾಗಿ ಗಮನಿಸಿರಲಿಲ್ಲ ಮತ್ತು ಅದಕ್ಕೆ ಮಹತ್ವವನ್ನೂ ನೀಡಿರಲಿಲ್ಲ. ಆದರೆ ನಿನ್ನೆ ಉಡುಪಿಯ‌ ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರ್ಪಡೆಯಾದ ಬಳಿಕ ಭಟ್ಟರು ನೀರಿಗೆ ಬಿದ್ದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅದರ ಜೊತೆಗೆ ಉಡುಪಿ ಶಾಸಕ ರಘುಪತಿ ಭಟ್ ಅವರನ್ನು ಕಾಂಗ್ರೆಸ್/ಬಿಜೆಪಿ ಕಾರ್ಯಕರ್ತರು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಪ್ರಮೋದ್ ಬಿಜೆಪಿಗೆ ಎಂಟ್ರಿಯಾಗುವುದರೊಂದಿಗೆ ಭಟ್ಟರು ಬಿದ್ದರು, ಇದು ಸಾಂಕೇತಿಕ ಮಾತ್ರ. ಕ್ರಮೇಣ ಶಾಸಕರು ಬಿಜೆಪಿಯಲ್ಲಿ ಪಲ್ಟಿ ಹೊಡೆಯಲಿದ್ದಾರೆ ಇತ್ಯಾದಿ ಶೀರ್ಷಿಕೆಗಳೊಂದಿಗೆ ಈ ವಿಡಿಯೋ ಈಗ ಭಾರೀ ವೈರಲ್ ಆಗುತ್ತಿದೆ!

Edited By : Nagesh Gaonkar
PublicNext

PublicNext

08/05/2022 07:34 pm

Cinque Terre

45.84 K

Cinque Terre

5

ಸಂಬಂಧಿತ ಸುದ್ದಿ