ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬ್ರಹ್ಮಾವರ : ಡಿಕೆಶಿ, ಸಿದ್ದರಾಮಯ್ಯ ನಿರುದ್ಯೋಗಿ ರಾಜಕಾರಣಿಗಳು: ಸಚಿವ ಕತ್ತಿ

ಬ್ರಹ್ಮಾವರ: ಸಿಎಂ ಸ್ಥಾನಕ್ಕೆ ಎರಡೂವರೆ ಸಾವಿರ ಕೋಟಿ ಕೇಳ್ತಾರೆ ಎಂಬ ಯತ್ನಾಳ್ ಹೇಳಿಕೆಗೆ ಉತ್ತರಿಸಿದ ಸಚಿವ ಕತ್ತಿ ,

ಮಾರುಕಟ್ಟೆಯಲ್ಲಿ ಆಮಿಷ ಕೊಡುವವರಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.

ಯತ್ನಾಳ್ ಹಣ ಕೊಟ್ಟು ಸಿಎಂ ಆಗ್ತಾರೆ ಎಂಬ ಭಾವನೆ ಬೇಡ. ಈಗಿನ ಪರಿಸ್ಥಿತಿ ಬಗ್ಗೆ ಯತ್ನಾಳ್ ಮಾತನಾಡಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಬ್ರಹ್ಮಾವರದ ನೀಲಾವರದಲ್ಲಿ ಮಾತನಾಡಿದ ಅವರು ,ಕಾಂಗ್ರೆಸ್ ನವರಿಗೆ ಮಾಡಲು ಬೇರೆ ಕೆಲಸ ಇಲ್ಲ.ಡಿಕೆಶಿ, ಸಿದ್ದರಾಮಯ್ಯ ನಿರುದ್ಯೋಗಿ ರಾಜಕಾರಣಿಗಳು.

ಅವರಿಗೆ ಮಾಡಲು ಬೇರೆ ಕೆಲಸ ಇಲ್ಲ.ಮುಂದಿನ ದಿನಮಾನದಲ್ಲೂ ಅವರು ನಿರುದ್ಯೋಗಿಗಳಾಗಿ ಉಳಿಯುತ್ತಾರೆ ಎಂದು ಕುಟುಕಿದ್ದಾರೆ.

ಪಿಎಸ್ ಐ ಹಗರಣ ನಾವೇ ಕಂಡು ಹಿಡಿದೆವು.ನಾವೇ ಹಗರಣವನ್ನು ಬಯಲಿಗೆಳೆದು ತನಿಖೆ ಮಾಡುತ್ತಿದ್ದೇವೆ.ಪ್ರಿಯಾಂಕ್ ಖರ್ಗೆ ನಿಪುಣ ರಾಜಕಾರಣಿ. ಸರಕಾರ ನಡೆಸಿ ಅನುಭವ ಇರುವವರು.

ಪ್ರಿಯಾಂಕ್ ಖರ್ಗೆ ರಾಜಕಾರಣಿಯಾಗಿ ವರ್ತಿಸಬೇಕು. ಕಾನೂನು ಚೌಕಟ್ಟಿಲ್ಲಿ ವಿಚಾರಣೆಗೆ ಹಾಜರಾಗಬೇಕು.ಪೋಲಿಸ್ ವಿಚಾರಣೆಗೆ ಅವರು ಸಹಕಾರ ಕೊಡಬೇಕು.ಪ್ರಿಯಾಂಕ್ ಖರ್ಗೆ ತನ್ನ ಹೇಳಿಕೆಗೆ ಬದ್ಧನಾಗಿರಬೇಕು ಎಂದು ಆಹಾರ ಮತ್ತು ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.

Edited By :
PublicNext

PublicNext

07/05/2022 03:53 pm

Cinque Terre

19.91 K

Cinque Terre

1

ಸಂಬಂಧಿತ ಸುದ್ದಿ