ಬ್ರಹ್ಮಾವರ: ಮುಖ್ಯಮಂತ್ರಿ ಆಗುವ ಅವಕಾಶ ಇದೆ. ಸಿಎಂ ಆಗುವ ಚಾನ್ಸ್ ನನಗೂ ಇದೆ, ದೇವರ ದಯೆ ಇದೆ. ರಾಜ್ಯದ ಜನರ ಆಶೀರ್ವಾದ ಇದ್ದರೆ ನಾನು ಒಂದು ದಿನ ಸಿಎಂ ಆಗ್ತೇನೆ ಎಂದು ಉಡುಪಿಯ ಬ್ರಹ್ಮಾವರದಲ್ಲಿ ಅರಣ್ಯ ಮತ್ತು ಆಹಾರ ಸಚಿವ ಉಮೇಶ್ ಕತ್ತಿ ಹೇಳಿದ್ದಾರೆ.
ಪೇಜಾವರ ಸ್ಮೃತಿ ವನದ ಭೂಮಿ ಪೂಜೆ ಬಳಿಕ ಮಾಧ್ಯಮದ ಜೊತೆ ಮಾತನಾಡಿದ ಅವರು, ನಾನು ಸಿಎಂ ಆಗುವ ಅವಸರದಲ್ಲಿ ಇಲ್ಲ. ಮುಖ್ಯಮಂತ್ರಿ ಸ್ಥಾನ ಬೇಕು ಬೇಕು ಅಂತ ಕೇಳಲ್ಲ. ಆದರೆ ಸಿಎಂ ಆಗಿ ರಾಜ್ಯ ನಿಭಾಯಿಸುವ ಕೆಪ್ಯಾಸಿಟಿ ನನಗೆ ಇದೆ ಎಂದರು.
ಕರ್ನಾಟಕದಲ್ಲಿ ಉತ್ತರ ಕರ್ನಾಟಕಕ್ಕೆ ಒತ್ತು ಸಿಗಬೇಕು. ಆ ಭಾಗಕ್ಕೆ ಅನ್ಯಾಯ ಆದಾಗ ರಾಜ್ಯ ಒಡೀಬೇಕು ಅಂದವನು ನಾನೇ. ಈಗ ಅಖಂಡ ಕರ್ನಾಟಕದ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆದರೆ ಎರಡು ರಾಜ್ಯ ಆಗದೆ ಬಿಡೋದಿಲ್ಲ.ಈಗ ಎರಡು ಭಾಗಕ್ಕೆ ಅನ್ಯಾಯವಾಗದೆ ಕೆಲಸ ಆಗುತ್ತಿದೆ. ಈಗ ಪ್ರತ್ಯೇಕ ರಾಜ್ಯ ಕೇಳುತ್ತಿಲ್ಲ, ಐಕ್ಯತೆಯಿಂದ ಇದ್ದೇನೆ. ಕರ್ನಾಟಕ ವಿಭಜನೆ ಹೋರಾಟ ಕೈಬಿಟ್ಟಿಲ್ಲ.ಉತ್ತರ ಕರ್ನಾಟಕಕ್ಕೆ ಅನ್ಯಾಯವಾದರೆ ಪ್ರತ್ಯೇಕ ಕೂಗು ಇರುತ್ತದೆ ಎಂದು ಹೇಳಿದ್ದಾರೆ.
PublicNext
07/05/2022 03:29 pm