ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಯತ್ನಾಳ್ ಹೇಳಿಕೆಯನ್ನು ಬಿಜೆಪಿ ಮಾಡುತ್ತದೆಯೇ; ಖಾದರ್ ಪ್ರಶ್ನೆ

ಮಂಗಳೂರು: ಸಿಎಂ ಹುದ್ದೆಗೆ ಹರಾಜು ದರವನ್ನು ಪ್ರಕಟಿಸಿರುವ ಬಸವನಗೌಡ ಪಾಟೀಲ್ ಹೇಳಿಕೆಗೆ ಬಿಜೆಪಿ ಏನು ಮಾಡುತ್ತದೆ, ತನಿಖೆ ಮಾಡುತ್ತದೆಯೇ ಎಂದು ವಿಪಕ್ಷ ಉಪನಾಯಕ ಯು.ಟಿ.ಖಾದರ್ ಟ್ವೀಟ್ ಮಾಡಿ ಪ್ರಶ್ನಿಸಿದ್ದಾರೆ. ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಅವರು ನಿಮ್ಮನ್ನು ಸಿಎಂ ಮಾಡ್ತೀವಿ 2,500 ಕೋಟಿ ರೂ. ರೆಡಿ ಮಾಡಿ ಇಡ್ರಿ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಇಂದು ಈ ಬಗ್ಗೆ ಟ್ವೀಟ್ ಮಾಡಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಪಿಎಸ್ಐ ನೇಮಕಾತಿ ಹಗರಣದ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿರುವ ಕಾಂಗ್ರೆಸ್ ನಾಯಕರಿಗೆ ಸರ್ಕಾರವೇ ಮುಂದೆ ನಿಂತು ನೋಟಿಸ್ ನೀಡಿತ್ತು. ಈಗ ಬಿಜೆಪಿಯ ಶಾಸಕ ಬಸನಗೌಡ ಯತ್ನಾಳ್ ಅವರೇ ಮುಖ್ಯಮಂತ್ರಿ ಹುದ್ದೆಗೆ ಹರಾಜು ದರವನ್ನು ಪ್ರಕಟಿಸಿದ್ದಾರೆ. ಬಿಜೆಪಿ ಕರ್ನಾಟಕ ಈಗೇನು ತನಿಖೆ ಮಾಡ್ತೀರಾ? ನೋಟೀಸ್ ನೀಡ್ತೀರಾ? ಜನ ನಿಮ್ಮನ್ನು ಇನ್ನು ಸಹಿಸೋಲ್ಲ ಎಂದು ಟ್ವೀಟ್ ಮಾಡಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

06/05/2022 10:34 pm

Cinque Terre

4.57 K

Cinque Terre

0