ಉಡುಪಿ: ಧಾರ್ಮಿಕ ಕೇಂದ್ರಗಳಿಗೆ ಬಂದವರಿಗೆ ಕೇಳಿದರೆ ಸಾಕು, ಇಡೀ ಊರಿಗೆ ಆಜಾನ್, ಮಂತ್ರ ಭಜನೆ ಕೇಳಬೇಕಾಗಿಲ್ಲ.ದೇವಸ್ಥಾನದ ಸುಪ್ರಭಾತಕ್ಕೂ ಸಾರ್ವಜನಿಕರಿಂದ ಆಕ್ಷೇಪ ಗಳಿವೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಹೇಳಿದ್ದಾರೆ.
ಶ್ರೀರಾಮಸೇನೆ ರಾಜ್ಯಾದ್ಯಂತ ಮೇ 9 ರಿಂದ ಭಜನೆ, ಹನುಮಾನ್ ಚಾಲೀಸ್ ಅಭಿಯಾನ ಹಮ್ಮಿಕೊಂಡ ಕುರಿತು ಕೇಳಿದ ಪ್ರಶ್ನೆಗೆ ಶಾಸಕರು ಉತ್ತರಿಸಿದರು. ಮಸೀದಿಯ ಎದುರು ಹೋಗಿ ಭಜನೆ ಮಾಡಿದರೆ ಸಂಘರ್ಷ ಆಗಬಹುದು.
ಆಜಾನ್ ಕುರಿತಾಗಿ ಸರಕಾರ ಮತ್ತು ಸುಪ್ರೀಂ ಕೋರ್ಟ್ ಆದೇಶ ಪಾಲನೆಯಾಗಬೇಕು.ಉಡುಪಿಯಲ್ಲಿ ಆಜಾನ್ ಶಬ್ದ ಕಡಿಮೆಯಾಗಿದೆ.
ಎಲ್ಲ ಧಾರ್ಮಿಕ ಕೇಂದ್ರಗಳು ಹಾರ್ನ್, ಮೈಕ್ ಗಳನ್ನು ಕೆಳಗೆ ಇಳಿಸುವುದು ಒಳ್ಳಯದು. ಟವರಿನಿಂದ ಮೈಕನ್ನು ಕೆಳಗಿಟ್ಟು ಸ್ಪೀಕರ್ ಬಾಕ್ಸ್ ನ್ನು ಬಳಸಿದರೆ ಉತ್ತಮ ಎಂದರು.
ದೇವಸ್ಥಾನ, ಕೃಷ್ಣಮಠದ ಸುತ್ತಮುತ್ತ ಮೈಕ್ ಬಳಕೆ ಕುರಿತೂ ಆಕ್ಷೇಪಗಳು ಇವೆ.ಹಾರ್ನ್ ಮೈಕ್ ಬದಲು ಸೌಂಡ್ ಬಾಕ್ಸ್ ಗಳನ್ನು ಉಪಯೋಗಿಸುವುದು ಸಮಸ್ಯೆಗೆ ಪರಿಹಾರ ನೀಡುತ್ತದೆ. ರಾಜ್ಯಾದ್ಯಂತ ಮೈಕ್ ಬದಲು ಸೌಂಡ್ ಬಾಕ್ಸ್ ಬಳಸಿದರೆ ಒಳ್ಳೆಯದು.ಸೌಂಡ್ ಜಾಸ್ತಿ ಇದ್ದರೆ ಮನವೊಲಿಸುವ ಕೆಲಸ ಮಾಡೋಣ ಎಂದು ಹೇಳಿದ್ದಾರೆ.
PublicNext
06/05/2022 05:19 pm