ಉಡುಪಿ: ಬಿಜೆಪಿಯಲ್ಲಿ ಹೊಸತನಕ್ಕೆ ಹೆಚ್ಚು ಗಮನ ನೀಡುತ್ತೇವೆ ಎಂಬ ಬಿ.ಎಲ್ ಸಂತೋಷ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಉಡುಪಿ ಶಾಸಕ ರಘುಪತಿ ಭಟ್ , ನಾನು ಹೊಸಬನೂ ಅಲ್ಲ ಹಳಬನೂ ಅಲ್ಲ.
ನಾನು ಮಧ್ಯದಲ್ಲಿರುವ ಶಾಸಕ .ನನಗಿಂತ ಬಾಹಳಷ್ಟು ಹಳಬ ಶಾಸಕರಿದ್ದಾರೆ. ಬಿಜೆಪಿಯಲ್ಲಿ 5 - 6 ಟರ್ಮ್ ಗೆದ್ದವರಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಭಟ್ ,ಬಿಜೆಪಿಯಲ್ಲಿ ಯಾವತ್ತೂ ಹೊಸತನ ಇದ್ದೇ ಇದೆ. ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ. ಆಂತರಿಕ ಚರ್ಚೆ ನಡೆಯುತ್ತದೆ.
ಜನಾಭಿಪ್ರಾಯ ಸಂಗ್ರಹಿಸುವ ವ್ಯವಸ್ಥೆಗಳು ನಮ್ಮ ಪಕ್ಷದಲ್ಲಿ ಇದೆ. ಜನರ ಜೊತೆ ಇದ್ದ ಶಾಸಕರಿಗೆ ಸಮಸ್ಯೆ ಆಗುವುದಿಲ್ಲ. ಜನರಿಂದ ದೂರ ಇದ್ದವರಿಗೆ ಸಮಸ್ಯೆಯಾಗಬಹುದು. ಬಿಜೆಪಿಯಲ್ಲಿ ಹೊಸಬರಿಗೆ ಅವಕಾಶ ಹೊಸತಲ್ಲ.ಹೊಸಬರು ಬಂದು ಹೊಸ ನಾಯಕತ್ವ ಸೃಷ್ಟಿಯಾಗುತ್ತದೆ. ರಾಜ್ಯದಲ್ಲಿ ಹೊಸದಾಗಿ ನಾಯಕತ್ವ ಬಂದೇ ಬರುತ್ತದೆ.ನಾನು ಮಾನಸಿಕವಾಗಿ ಎಲ್ಲದಕ್ಕೂ ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.
PublicNext
06/05/2022 03:09 pm