ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಿಂದೂ ಚಿನ್ನದಂಗಡಿಯಲ್ಲೇ ಚಿನ್ನ ಖರೀದಿಸೋಣ; ಮುತಾಲಿಕ್

ಮಂಗಳೂರು: ಕೇರಳ ಮೂಲದ ಚಿನ್ನದ ಮಾಫಿಯಾ ಹಿಂದೂ ಸಮಾಜ, ಹಿಂದೂ ದೇಶಕ್ಕೆ ಅಪಾಯಕಾರಿಯಾಗಿದೆ. ಆದ್ದರಿಂದ ಈ ಜಾಲಕ್ಕೆ ಅಕ್ಷಯ ತೃತೀಯ ದಿನ ಪಾಠ ಕಲಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀರಾಮ ಸೇನೆ ರಾಜ್ಯಾದ್ಯಂತ ಜಾಗೃತಿ ಮೂಡಿಸುವ ಸಲುವಾಗಿ ಅಕ್ಷಯ ತೃತೀಯದಂದು ಹಿಂದೂ ಚಿನ್ನದಂಗಡಿಯಲ್ಲಿಯೇ ಮಹಿಳೆಯರು ಚಿನ್ನ ಖರೀದಿಸಬೇಕೆಂದು ಮಹಿಳೆಯರಿಗೆ ಶ್ರೀರಾಮಸೇನೆ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಮನವಿ ಮಾಡಿದರು‌.

ದುಬೈನಿಂದ ಅಕ್ರಮ ಸಾಗಾಟದಿಂದ ಬರುವ ಚಿನ್ನವನ್ನು ಕೇರಳಕ್ಕೆ ಸಾಗಾಟವಾಗುತ್ತಿದ್ದು, ಅಲ್ಲಿಂದ ಕರ್ನಾಟಕ, ಗೋವಾ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಗೆ ಸರಬರಾಜು ಮಾಡಲಾಗುತ್ತದೆ‌. ಕೇರಳ ಕಳ್ಳತನದಿಂದ ಚಿನ್ನ ಸರಬರಾಜು ಆಗುವ ಅತೀ ದೊಡ್ಡ ಕೇಂದ್ರ. ಕಳ್ಳತನದಿಂದ ಬರುವ ಚಿನ್ನದ ಮಾಫಿಯಾ ಹಿಂದೂ ಸಮಾಜಕ್ಕೆ ವ್ಯವಸ್ಥಿತವಾಗಿ ಮೋಸ ಮಾಡುತ್ತಿದೆ. ಆದ್ದರಿಂದ ಮಹಿಳೆಯರು, ಮಹಿಳಾ ಸಂಘಟನೆ ಇದನ್ನು ಗಮನಿಸಬೇಕಾಗಿದೆ ಎಂದರು.

ಕೇರಳದಲ್ಲಿ 800ಕ್ಕೂ ಅಧಿಕ ಹಿಂದೂ ಕಾರ್ಯಕರ್ತರ ಕೊಲೆಯಾಗಿದೆ. ಹಿಂದೂ ಸಿದ್ಧಾಂತ ಹೊಂದಿರುವ, ದೇಶಭಕ್ತಿಯ ಕಾರ್ಯ ಎಸಗಿರುವ ಯುವಕರು ಇಲ್ಲಿ ಕೊಲೆಯಾಗಿದ್ದಾರೆ. ಈ ಕೊಲೆಗಡುಕರಿಗೆ, ಈ ಮುಸ್ಲಿಂ ದುಷ್ಕರ್ಮಿ ಜಾಲಕ್ಕೆ ಅಕ್ರಮ ಸಾಗಾಟದ ಚಿನ್ನದ ವ್ಯವಹಾರದಿಂದ ಬರುವ ಹಣ ಹೋಗುತ್ತಿದೆ.

ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ರಾಜ್ಯದಿಂದ ನಿರಂತರವಾಗಿ ಗೋವುಗಳು, ಗೋಮಾಂಸ ಸಾಗಾಟ ಮಾಡಲಾಗುತ್ತಿದೆ. ಕೇರಳದಿಂದ ವಿದೇಶಕ್ಕೂ ಗೋಮಾಂಸ ರಫ್ತು ಆಗುತ್ತಿದೆ. ಈ ಎಲ್ಲಾ ಕಾರ್ಯಗಳಿಗೆ ಕಳ್ಳ ದಂಧೆಯ ಚಿನ್ನದ ವ್ಯಾಪಾರಿಗಳು ನೆರವು ನೀಡುತ್ತಿದ್ದಾರೆ.

ಕೇರಳ ಒಂದರಲ್ಲೇ 12 ಸಾವಿರಕ್ಕೂ ಅಧಿಕ ಹಿಂದೂ ಯುವತಿಯರನ್ನು ಲವ್ ಜಿಹಾದ್ ಮಾಡಿ ಮತಾಂತರ ಮಾಡಲಾಗಿದೆ. ಈ ಯುವತಿಯರನ್ನು ದುಬೈ, ಅರಬ್ ರಾಷ್ಟ್ರಗಳಿಗೆ ಮಾರಾಟ ಮಾಡಿದ್ದೂ ಇದೆ.

ಇಂತಹ ದುಷ್ಕೃತ್ಯಗಳಿಗೆ ಚಿನ್ನದ ವ್ಯಾಪಾರಿಗಳು ಪರ್ಯಾಯವಾಗಿ ಸಹಕಾರ ನೀಡುತ್ತಿದ್ದಾರೆ. ಹಾಗಾಗಿ ಮಹಿಳೆಯರು ಹಿಂದೂ ಚಿನ್ನದಂಗಡಿಯಲ್ಲಿಯೇ ಚಿನ್ನ ಖರೀದಿಸಬೇಕೆಂದು ಪ್ರಮೋದ್ ಮುತಾಲಿಕ್ ಮನವಿ ಮಾಡಿದರು.

Edited By : Nagesh Gaonkar
PublicNext

PublicNext

01/05/2022 09:31 pm

Cinque Terre

46.26 K

Cinque Terre

32

ಸಂಬಂಧಿತ ಸುದ್ದಿ