ಉಡುಪಿ: ಇಂದು ವಿಶ್ವ ಕಾರ್ಮಿಕರ ದಿನ . ಉಡುಪಿಯಲ್ಲಿ ಜೆಸಿಟಿಯು ನೇತೃತ್ವದಲ್ಲಿ ಕಾರ್ಮಿಕರು ಮೆರವಣಿಗೆ ನಡೆಸಿ ಸಾರ್ವಜನಿಕ ಸಭೆ ನಡೆಸಿದರು.
ಉಡುಪಿ ನಗರದ ಸಿಂಡಿಕೇಟ್ ಟವರ್ ಬಳಿಯಿಂದ ಮೆರವಣಿಗೆ ಹೊರಟ ಕಾರ್ಮಿಕರು ,ಜೋಡುಕಟ್ಟೆಯಾಗಿ ಅಜ್ಜರಕಾಡು ಹುತಾತ್ಮ ಸ್ಮಾರಕ ಬಳಿ ಸಾರ್ವಜನಿಕ ಸಭೆ ನಡೆಸಿದರು.
ಕಾರ್ಯಕ್ರಮದಲ್ಲಿ ಜೆಸಿಟಿಯುನ ಉಡುಪಿ ಜಿಲ್ಲಾ ಸಂಚಾಲಕರಾದ ಕೆ ಶಂಕರ್, ವಿಮಾ ನೌಕರರ ಸಂಘದ ಕುಂದರ್ ಸಹಿತ ಕಾರ್ಮಿಕ ಮುಖಂಡರು ಮತ್ತು ಹಲವು ಸಂಖ್ಯೆಯಲ್ಲಿ ಕಾರ್ಮಿಕರು ಭಾಗವಹಿಸಿದರು.
Kshetra Samachara
01/05/2022 07:11 pm