ಕಾರ್ಕಳ: ಪಿ ಎಸ್ .ಐ ನೇಮಕ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ಶಾಸಕ ಪ್ರಿಯಾಂಕ ಖರ್ಗೆ ಅವರನ್ನು ತನಿಖೆಗೆ ಒಳಪಡಿಸಿ ಎಂದು ಸಚಿವ ಸುನಿಲ್ ಕುಮಾರ್ ಅವರು ನೀಡಿದ ಹೇಳಿಕೆಯ ಬೆನ್ನಲ್ಲೇ ಸಿ.ಐ.ಡಿ ಪೊಲೀಸರು ನೋಟಿಸ್ ನೀಡಿರುವುದು ಭ್ರಷ್ಟಾಚಾರದ ವಿರುದ್ಧ ದನಿಯೆತ್ತುವವರ ವಿರುದ್ಧವೇ ತಮ್ಮ ಅಧೀನದಲ್ಲಿರುವ ತನಿಖಾ ಸಂಸ್ಥೆಗಳ ಮೂಲಕ ಧ್ವನಿಯನ್ನು ಅಡಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಗರಣ ಬಯಲಿಗೆ ಬಂದ ಕೂಡಲೇ ಮಾಧ್ಯಮಗಳಲ್ಲಿ ಹೆಸರು ಕೇಳಿಬಂದ ಬಿಜೆಪಿ ನಾಯಕಿ ತಲೆಮರೆಸಿಕೊಂಡು ಕೆಲವು ದಿನಗಳಾದರೂ ಬಂಧಿಸಲು ಆಗದ ಸರಕಾರ ಧ್ವನಿಯೆತ್ತಿದವರಿಗೆ ನೋಟಿಸ್ ನೀಡುವ ಮೂಲಕ ಭ್ರಷ್ಟಾಚಾರಿಗಳನ್ನು ರಕ್ಷಿಸಲು ನೋಡುತ್ತಿದೆ.
ಹಾಗೆಯೇ ಪ್ರಿಯಾಂಕ್ ಖರ್ಗೆಯವರನ್ನು ತನಿಖೆಗೆ ಒಳಪಡಿಸಬೇಕು ಅಂತ ಹೇಳುವ ಸುನಿಲ್ ಕುಮಾರ್ ಹೆಸರು ಕಾರ್ಕಳದಲ್ಲಿ ನಡೆದ ಕೆಲವು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಕೇಳಿಬಂದಿದ್ದು ತನಿಖೆ ನಡೆಸುವುದಾದರೆ ಕಾರ್ಕಳದಿಂದ ನಡೆಸಬೇಕು ಎಂದು ಬ್ಲಾಕ್ ಮಹಿಳಾ ಕಾಂಗ್ರೆಸ್ ಅನಿತಾ ಡಿಸೋಜರವರು ಒತ್ತಾಯಿಸಿದ್ದಾರೆ.
Kshetra Samachara
26/04/2022 03:04 pm