ಮಂಗಳೂರು : ಕೋಮುವಾದಿ ಕ್ರಿಮಿ ಪ್ರಮೋದ್ ಮುತಾಲಿಕ್ ಅನ್ನು ಯಾಕೆ ಹೈಲೈಟ್ ಮಾಡಲಾಗುತ್ತಿದೆ ಎಂದು ಗೊತ್ತಿಲ್ಲ. ಆತ ಜನ ವಿರೋಧಿ, ದೇಶ ವಿರೋಧಿ, ಮನುಷ್ಯ. ತಕ್ಷಣ ಆತನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅಬ್ದುಲ್ ಮಜೀದ್ ಹಿಂದೂಗಳ ಜುವೆಲ್ಲರಿ ಶಾಪ್ ನಲ್ಲಿಯೇ ಚಿನ್ನ ಖರೀದಿಸುವಂತೆ ಹೇಳಿರುವ ಪ್ರಮೋದ್ ಮುತಾಲಿಕ್ ಹೇಳಿಕೆಗೆ ಗರಂ ಆಗಿದ್ದಾರೆ.
ಇನ್ನು ಅರಾಜಕತೆ ಸೃಷ್ಟಿ ಮಾಡುವವರನ್ನು ರಾಜ್ಯ ಸರಕಾರ ಕಂಟ್ರೋಲ್ ಮಾಡುತ್ತಿಲ್ಲ. ಭಾತೃತ್ವಕ್ಕೆ ವಿರೋಧವಾಗಿ ಹೇಳಿಕೆ ನೀಡುವ ಕೋಮು ಕ್ರಿಮಿಗಳನ್ನು ತಡೆಯಬೇಕಾಗಿದೆ.
ಪ್ರಮೋದ್ ಮುತಾಲಿಕ್ ಹೇಳಿಕೆಗಳಿಗೆ ಮಾಧ್ಯಮಗಳು ಹೆಚ್ಚು ಪ್ರಚಾರ ಕೊಡುತ್ತಿದೆ. ಆದ್ದರಿಂದ ಮಾಧ್ಯಮಗಳು ಪ್ರಮೋದ್ ಮುತಾಲಿಕ್ ಗೆ ಪ್ರೋತ್ಸಾಹ ಕೊಡಬಾರದು. ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಈ ರೀತಿಯ ಹೇಳಿಕೆಗಳನ್ನು ನೀಡಲಾಗುತ್ತದೆ ಎಂದರು.
PublicNext
25/04/2022 07:24 pm