ಉಡುಪಿ: ಉಡುಪಿಯ ಆರು ಜನ ಪಿಯು ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಕೇಳಿದ್ದರು.ಆದರೆ ಅವಕಾಶ ನೀಡಿರಲಿಲ್ಲ.ಓರ್ವ ವಿದ್ಯಾರ್ಥಿನಿ ಕುಪಿತಗೊಂಡು ದೇಶ ಎತ್ತ ಸಾಗುತ್ತಿದೆ? ಎಂದು ಟ್ವೀಟ್ ಮಾಡಿದ್ದಳು.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ,ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ.
ದೇಶದ ಆಶಯವನ್ನು ಅರ್ಥ ಮಾಡಿಕೊಂಡು ಕಾನೂನು ಗೌರವಿಸುವುದು ನಿಮ್ಮ ಜವಾಬ್ದಾರಿ.ದೇಶ ಎತ್ತ ಸಾಗುತ್ತಿದೆ ?ಎಂಬುದು ಪ್ರಶ್ನೆಯಲ್ಲ,ಈ ವಿದ್ಯಾರ್ಥಿನಿಯ ಮನಸ್ಥಿತಿ ಎತ್ತ ಸಾಗುತ್ತಿದೆ ಎಂಬುದು ಆತಂಕಕಾರಿ.ಹಿಜಾಬ್ ನ ಹೆಸರಲ್ಲಿ ಕೆಲವು ವಿದ್ಯಾರ್ಥಿನಿಯರು ಪರೀಕ್ಷೆ ಬರೆಯುವುದಿಲ್ಲ ಎಂದು ಸೆಡ್ಡು ಹೊಡೆದಿದ್ದಾರೆ.ಈ ವಿದ್ಯಾರ್ಥಿಗಳ ಹಿಂದೆ ಯಾರಿದ್ದಾರೆ ಎಂದು ಗಮನಿಸಬೇಕು.
ಸರಕಾರ ಹೈಕೋರ್ಟ್ ಆದೇಶ ಪಾಲನೆ ಮಾಡುತ್ತಿದೆ.ಸರಕಾರದ ಆದೇಶಕ್ಕೆ ವಿದ್ಯಾರ್ಥಿನಿಯರು ಗೌರವ ಕೊಡುತ್ತಿಲ್ಲ.ಈ ವಿದ್ಯಾರ್ಥಿನಿಯರ ಮನಸ್ಥಿತಿ ಎತ್ತ ಸಾಗುತ್ತಿದೆ ಎಂದು ಗಂಭೀರವಾಗಿ ಆಲೋಚನೆ ಮಾಡಬೇಕು.ಸಂವಿಧಾನದ ಆದೇಶ ಪಾಲಿಸುವುದು ಆ ವಿದ್ಯಾರ್ಥಿನಿಯರ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ.
ಈ ರೀತಿ ಸೆಡ್ಡು ಹೊಡೆದರೆ ಕಾನೂನು ತನ್ನದೇ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತೆ ಎಂದು ಹೇಳಿದ್ದಾರೆ.
PublicNext
25/04/2022 05:52 pm