ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೋಟ:PSI ಹಗರಣದಲ್ಲಿ ಕಾಂಗ್ರೆಸ್ ನವರೇ ಸಿಕ್ಕಿಹಾಕಿಕೊಂಡಿದ್ದಾರೆ !

ಕೋಟ: ಪಿಎಸ್ ಐ ಪರೀಕ್ಷೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಗೊತ್ತಾದ ತಕ್ಷಣ ಸಿಓಡಿ ತನಿಖೆಗೆ ಆದೇಶಿಸಿದ್ದೇವೆ.ಒಳ್ಳೆಯ ತಂಡ ರಚನೆ ಮಾಡಿ ಆಮೂಲಾಗ್ರವಾಗಿ ತನಿಖೆ ಮಾಡಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಂತೆ ಆದೇಶಿಸಿದ್ದೆ. ಆದರೆ ಈಗ ಕಾಂಗ್ರೆಸ್ ನವರು ನಮಗೆ ಏನೋ‌ ಸಿಕ್ಕಿದೆ ಎನ್ನುತ್ತಿದ್ದಾರೆ. ಆದರೆ ಅದರಲ್ಲಿ ಏನು ಇಲ್ಲ ಎಂದು ಗೃಹ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲೆಯ ಸಾಲಿಗ್ರಾಮಕ್ಕೆ ಆಗಮಿಸಿದ್ದ ಸಚಿವರು ಮಾಧ್ಯಮದ ಜೊತೆ ಮಾತನಾಡುತ್ತಾ ,ಕಾಂಗ್ರೆಸ್ ಮುಖಂಡರ ಶಿಷ್ಯರೇ ಅವರ ಮನೆಯಲ್ಲಿರುವವರೇ ಇಬ್ಬರು ನಿನ್ನೆ ಸಿಕ್ಕಿ ಹಾಕಿಕೊಂಡಿದ್ದಾರೆ. ಈ ಘಟನೆಯ ಬಳಿಕ ನಮ್ಮ ಬಳಿ ಆಡಿಯೋ ಎಂದು ಪತ್ರಿಕಾಗೋಷ್ಠಿ ಕರೆದಿದ್ದಾರೆ.

ಈ ಮೊದಲು ಇದೇ ವಿಚಾರವಾಗಿ ವಿಧಾನಸಭೆಯಲ್ಲಿ ಪ್ರಶ್ನೆ ಕೇಳಿದ್ದಾರೆ, ಆಗ ಯಾಕೆ ಆಡಿಯೋ ವಿಚಾರ ಬಹಿರಂಗವಾಗಿಲ್ಲ? ಈಗಲೂ ಕೂಡ ಮಾಧ್ಯಮದ ಎದುರಿಗೆ ಈ ವಿಚಾರವನ್ನು ಹೇಳುತ್ತಿರುವುದು ರಾಜಕೀಯ ಲಾಭಕ್ಕಾಗಿ ಮಾತ್ರ.ಒಬ್ಬ ಜವಬ್ದಾರಿ ಸ್ಥಾನದಲ್ಲಿರುವ ಶಾಸಕ ತನಿಖೆ ನಡೆಯುವ ವೇಳೆ ಸಹಕರಿಸುವ ಬದಲು ಈ ಪ್ರಕರಣದಲ್ಲಿ‌ ಏನೇನೋ ಮಾಡುತ್ತಿದ್ದಾರೆ.ನಿನ್ನೆ ಸಿಕ್ಕಿ ಹಾಕಿಕೊಂಡವರು ಅವರ ಬಲಗೈ ಬಂಟರು.ಮೊನ್ನೆ ಸಿಕ್ಕಿ ಹಾಕಿಕೊಂಡವರು ಅವರ ಎಂಎಲ್ ಎ ಗನ್ ಮ್ಯಾನ್.ಪಿಎಸ್ಐ ಪರೀಕ್ಷೆ ಹಗರಣವನ್ನು ನಾವು ಪ್ರಾಮಾಣಿಕವಾಗಿ ತನಿಖೆ ಮಾಡುತ್ತಿದ್ದೇವೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

Edited By : Nagesh Gaonkar
PublicNext

PublicNext

23/04/2022 07:51 pm

Cinque Terre

30.18 K

Cinque Terre

5

ಸಂಬಂಧಿತ ಸುದ್ದಿ