ಉಡುಪಿ: ರಾಜ್ಯದಲ್ಲಿ ಕೋಮು ಗಲಭೆ ವಿಚಾರವಾಗಿ ಉಡುಪಿಯಲ್ಲಿ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯದಲ್ಲಿ ಕಿಡಿಗೇಡಿಗಳ ಕೆಲಸ ತೀಕ್ಷ್ಣವಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕ ಜನರ ಭಾವನೆ ಕೆರಳಿ ಸುತ್ತಿದ್ದಾರೆ. ರಾಜ್ಯದಲ್ಲಿ ಧರ್ಮದ ದುರ್ಬೋಧನೆ ಜಾಸ್ತಿಯಾಗುತ್ತಿದೆ ಎಂದು ಹೇಳಿದ್ದಾರೆ.
ಕಲ್ಲು ತೂರಾಟ ನಡೆಸಿ ಬೆಂಕಿ ಹಚ್ಚಿ ಸಮಾಜ ಒಡೆಯುತ್ತಿದ್ದಾರೆ. ಸಂಘರ್ಷ ಆದ ಸ್ಥಳಗಳಲ್ಲಿ ಕಟ್ಟುನಿಟ್ಟಿನ ಕ್ರಮವಾಗಿದೆ. ಪುಂಡು ಪೋಕರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುತ್ತದೆ. ಸತ್ಯ ಹೇಳುವವರಿಗಿಂತ ಟೀಕಿಸುವವರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಹೀಗಾಗಿ ಟೀಕೆಯೇ ಸತ್ಯ ಅನ್ನಿಸುವುದು ಸಹಜ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
PublicNext
19/04/2022 06:44 pm