ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಕಮಿಷನ್ ಕೇಳಿದ ಇಲಾಖೆ, ಅಧಿಕಾರಿಯ ಹೆಸರು ಬಹಿರಂಗಪಡಿಸಿ; ಶ್ರೀಗಳಿಗೆ ಸಚಿವ ಕೋಟ ಆಗ್ರಹ

ಉಡುಪಿ: ಯಾವ ಕಾಮಗಾರಿಯ ಹಣ ಬಿಡುಗಡೆಗೆ ನೀವು ಕಮಿಷನ್ ನೀಡಿದ್ದೀರಿ? ನಿಮ್ಮ ಬಳಿ ಕಮಿಷನ್ ಹಣ ಕೇಳಿದವರು ಯಾರು ಎಂಬುದನ್ನು ಸ್ಪಷ್ಟಪಡಿಸಿ. ಸಾಧು ಸಂತರು ಹೇಳಿಕೆ ಕೊಡುವಾಗ ಗೊಂದಲ ಇರಲಾರದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ದಿಂಗಾಲೇಶ್ವರ ಸ್ವಾಮೀಜಿ ಕಮಿಷನ್ ಆರೋಪ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ ಸಚಿವರು, ಸಿಎಂ ಬೊಮ್ಮಾಯಿ 65 ಮಠಗಳಿಗೆ 190 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಪ.ಜಾತಿ, ಪ.ಪಂಗಡಕ್ಕೆ ಸೇರಿದ 12 ಮಠಗಳಿಗೆ ಅನುದಾನ ನೀಡಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ 53 ಮಠಗಳಿಗೆ ಅನುದಾನ ನೀಡಿದ್ದಾರೆ. ಹಣ ಬಿಡುಗಡೆ ಆದೇಶವಾಗಿದೆ, ಆದರೆ ಒಂದು ರೂಪಾಯಿ ಕೂಡ ಬಿಡುಗಡೆಯಾಗಿಲ್ಲ. ಮಹಜರು ಮತ್ತು ಯೋಜನಾ ವರದಿ ಪ್ರಕ್ರಿಯೆ ಮುಗಿದ ನಂತರ ಬಿಡುಗಡೆಯಾಗುತ್ತದೆ. ಕಮಿಷನ್ ಕೇಳಿದ ಇಲಾಖೆ ಮತ್ತು ಅಧಿಕಾರಿಯ ಹೆಸರನ್ನು ಬಹಿರಂಗಪಡಿಸಿ. ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗ ಇಲಾಖೆ ಪಾರದರ್ಶಕವಾಗಿ ಕೆಲಸ ಮಾಡಬೇಕು ಅನ್ನೋದು ನನ್ನ ಇರಾದೆ. ಕಮಿಷನ್ ಪಡೆದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವರು ತಿಳಿಸಿದ್ದಾರೆ.

Edited By :
Kshetra Samachara

Kshetra Samachara

19/04/2022 06:16 pm

Cinque Terre

5.88 K

Cinque Terre

1

ಸಂಬಂಧಿತ ಸುದ್ದಿ