ಸುರತ್ಕಲ್ : ಆಕ್ಷೇಪಾರ್ಹ ಪೋಸ್ಟ್ ಹಾಕಿದ ಆರೋಪಿಯನ್ನು ಬಂಧಿಸಿದ್ದರೂ ,ಕಲ್ಲು ಹಿಡಿದುಕೊಂಡು ಬಂದು ಪೊಲೀಸ್‍ರ ಮೇಲೆ ಹಲ್ಲೆ, ಕಾನೂನು ಸುವ್ಯವಸ್ಥೆ ಮುರಿದು ಶಾಂತಿಗೆ ದಕ್ಕೆ ತರುವ ಇಂತಹ ನೀಚ ಕೃತ್ಯಗಳಾದಾಗ ಅಡಗಿ ಕೂರುವ ಇಬ್ಬಗೆ ನೀತಿಯ ನಕಲಿ ಜಾತ್ಯಾತೀತರನ್ನು ರಾಜ್ಯದ ಜನತೆ ಮೂಲೆಗುಂಪು ಮಾಡಬೇಕೆಂದು ಡಾ.ಭರತ್ ಶೆಟ್ಟಿ ವೈ ಹೇಳಿದ್ದಾರೆ.
ಪೊಲೀಸರಿಗೆ ದೂರು ನೀಡುವುದು ಬಿಟ್ಟು ಕಲ್ಲು ಹಿಡಿದು ಪೊಲೀಸ್ ಠಾಣೆ ಧ್ವಂಸ ಮಾಡಲು ಮುಂದಾಗಿದ್ದು ರೌಡಿತನದ ಪರಮಾವಧಿ ಪೊಲೀಸರಿಗೆ ಗಾಯವಾಗಿದ್ದು ಇದು ಕಾನೂನಿನ ಮೇಲಣ ಹಲ್ಲೆಯಾಗಿದೆ.ರಾಮನವಮಿ,ಹನುಮ ಜಯಂತಿ ಸಂದರ್ಭ ದೇಶದ ನಾನಾ ಭಾಗದಲ್ಲಿ ಗಲಭೆ ನಡೆಸಲು ಮುಸ್ಲಿಂ ಗೂಂಡಾಗಳು ಷಡ್ಯಂತ್ರ ರೂಪಿಸಿ ಸಾವಿರಾರು ಮಂದಿ ಏಕಕಾಲಕ್ಕೆ ಸೇರಿ ಹಿಂದೂಗಳ ಮನೆ,ಅಂಗಡಿ,ದೇವಸ್ಥಾನಗಳನ್ನ ಧ್ವಂಸ ಮಾಡಲಾಗಿದೆ.
ಶಾಸಕ ಅಖಂಡ ಶ್ರೀನಿವಾಸ್ ಮನೆ ದಾಳಿ, ಮಂಗಳೂರಿನಲ್ಲಿ ಗಲಭೆ,ಇದೀಗ ಹುಬ್ಬಳ್ಳಿ ಕಥೆ, ಸಣ್ಣಪುಟ್ಟ ವಿಚಾರಗಳಿಗೆ ಕಾನೂನು ಮುರಿಯಲು ಧೈರ್ಯ ತೋರುವವರನ್ನು ಮಟ್ಟ ಹಾಕದೆ ,ಗಲಬೆಕೋರರ ಮೆಲೆ ಇದ್ದ ಕೇಸು ವಜಾಗೊಳಿಸಿ ಈ ಹಿಂದಿನ ಕಾಂಗ್ರೆಸ್ ಸರಕಾರ ಪರೋಕ್ಷ ಕುಮ್ಮಕ್ಕು ನೀಡಿದ್ದು ಇಂದಿನ ಸ್ಥಿತಿ ಮುಂದುವರಿಯಲು ಕಾರಣವಾಗಿದೆ ಎಂದು ಟೀಕಿಸಿದ್ದು, ಇದೀಗ ಸಿದ್ದರಾಮಯ್ಯ,ಯು ಟಿ ಖಾದರ್, ಡಿ.ಕೆ ಶಿವಕುಮಾರ್ ಅಡಗಿ ಕೂತಿರುವುದು ಯಾಕೆ?ಮಾಧ್ಯಮಗಳಿಗೆ ಹೇಳಿಕೆ ನೀಡುವ ಶೂರರು ಎಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ತಕ್ಷಣ ಗೃಹ ಇಲಾಖೆ ಕೂಡಲೇ ಹಾನಿ ಮಾಡಿದ ಆರೋಪಿಗಳಿಂದಲೇ ದಂಡ ಪಡೆದುಕೊಳ್ಳಬೇಕು.ಹಾಗೂ ರೌಡಿಶೀಟ್ ತೆರೆದು ಗಡಿಪಾರಿನ ಶಿಕ್ಷೆ ನೀಡಬೇಕು ಎಂದು ಡಾ.ಭರತ್ ಶೆಟ್ಟಿ ವೈ ಒತ್ತಾಯಿಸಿದ್ದಾರೆ.
Kshetra Samachara
17/04/2022 08:27 pm