ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು:ನಾವು ಲಂಚ ತೆಗೆದುಕೊಂಡಿಲ್ಲ ಎಂದು ಪ್ರಮಾಣ ಮಾಡಲು ಆಗುತ್ತಾ ? ಸರ್ಕಾರಕ್ಕೆ ಹಿಂದೂ ಮಹಾಸಭಾ ಪ್ರಶ್ನೆ!

ಮಂಗಳೂರು:ಅಖಿಲ ಭಾರತ ಹಿಂದೂ ಮಹಾಸಭಾ ಮಾಜಿ ಸಚಿವ ಈಶ್ವರಪ್ಪ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿ‍ದೆ. ಹೌದು. ಮಂಗಳೂರು ನಗರದ ಖಾಸಗಿ ಹೊಟೇಲ್ ನಲ್ಲಿ‌ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಹಿಂದೂ ಮಹಾಸಭಾ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಭ್ರಷ್ಟಾಚಾರ ನಿರ್ಮೂಲನೆ ಮಾಡ್ತೇವೆ. ಸ್ವಚ್ಛ ಆಡಳಿತ ಕೊಡ್ತೇವೆ ಎಂದು ಭರವಸೆ ‌ನೀಡಿ ಅಧಿಕಾರಕ್ಕೇರಿದ್ದ ಬಿಜೆಪಿ ಸರ್ಕಾರ ಈಗ ಏನ್ ಮಾಡ್ತಿದೆ ಎಂದು ಕಿಡಿಕಾರಿದ್ರು.

ಈಶ್ವರಪ್ಪನವರು ನಾನು ಕಮಿಷನ್ ಕೇಳಿಲ್ಲ ಎಂದು ಹೇಳ್ತಿದ್ದಾರೆ. ನಾನು ಅವರಿಗೆ ಸವಾಲ್ ಹಾಕ್ತಿದ್ದೀನಿ, ಈಶ್ವರಪ್ಪ ಸಹಿತ ಈಗಿನ ಮಂತ್ರಿಮಂಡಲದ ಸಚಿವರು ಧರ್ಮಸ್ಥಳಕ್ಕೆ ಬಂದು, ನಾವು ಲಂಚ ತೆಗೆದಿಲ್ಲ ಎಂದು ಆಣೆ ಮಾಡಲಿ. ನಿಮಗೆ ಪ್ರಮಾಣ ಮಾಡಲು ಆಗುತ್ತಾ..? ಆ ತಾಕತ್ತ್ ಇದ್ಯಾ ಎಂದು ಪ್ರಶ್ನೆ ಮಾಡಿದರು. ನೀವು ಧರ್ಮಸ್ಥಳದ ದೇವರನ್ನು ಒಪ್ಪುವುದಾದ್ರೆ ಅಲ್ಲಿಗೆ ಬರಲು ರೆಡಿ ಇದ್ದೀರಾ..? ನಾವು ಕೂಡಾ ಬರ್ತೀವಿ‌. ಇಡೀ ಮಾಧ್ಯಮದವರನ್ನು ಕರೆಯೋಣ.

ಆಗ ನಾವು ನಿಮ್ಮನ್ನು ಒಳ್ಳೆಯವರು ಎಂದು ಕರೆಯಬಹುದು. ಆದ್ರೆ ಪ್ರಮಾಣ ಮಾಡಿಯೂ ನೀವು ತಪ್ಪಿತಸ್ಥರು ಎಂದು ಸಾಬೀತಾದಲ್ಲಿ ನೀವು ಎರಡೆರಡು ಧರ್ಮದ್ರೋಹಿಗಳು ಆಗ್ತೀರಾ ಎಂದರು. ಇನ್ನು ನೀವು ಅಧಿಕಾರಕ್ಕೆ ಬರುವಾಗ ಕಾಂಗ್ರೆಸ್ ಲೂಟಿದೆ ಎಂದು ಆರೋಪಿಸಿದ ನೀವು ಈಗೇನು ಮಾಡ್ತಿದ್ದೀರಾ..? 40% ಕಮಿಷನ್ ಕೇಳ್ತಿದ್ದೀರಿ ಅಲ್ವಾ..? ಒಂದು ಕಾಮಗಾರಿಯಲ್ಲಿ 40% ಕಮಿಷನ್ ಪಡೆಯುವುದೆಂದ್ರೆ ಆ ಕಾಮಗಾರಿಯ ಸ್ಥಿತಿ ಹೇಗಿರಬಹುದು..? ನೀವೇ ಹೇಳಿ‌ ಅಂದರು‌.

Edited By :
Kshetra Samachara

Kshetra Samachara

16/04/2022 02:15 pm

Cinque Terre

21.29 K

Cinque Terre

2