ಮಂಗಳೂರು : ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಎಲ್ಲೂ ಡೆತ್ ನೋಟ್ ಸಿಕ್ಕಿಲ್ಲ. ಕೇವಲ ವಾಟ್ಸಪ್‌ನಲ್ಲಿ ಹರಿದಾಡಿದ್ದು ಮಾತ್ರ ಸಿಕ್ಕಿರೋದು. ಯಾಕೆ ನೀವು ಅವತ್ತು ಜಾರ್ಜ್ ರನ್ನು ಬಂಧಿಸಿಲ್ಲ. ಸಂತೋಷ್ ಸಾವಿನ ಹಿಂದೆ ಕಾಂಗ್ರೆಸ್ ಇದೆ. ತನಿಖೆ ನಡೆಯುತ್ತಿದೆ. ಸತ್ಯಾಸತ್ಯತೆ ಬಯಲಾಗ್ತದೆ ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಮಂಗಳೂರಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಇದ್ದಾಗ 24 ಮಂದಿ ಕಾರ್ಯಕರ್ತರ ಹತ್ಯೆಯಾಗಿತ್ತು.
ಆವಾಗ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಬೇಕಾಗಿತ್ತು. ಹಗರಣವೊಂದರಲ್ಲಿ ಬೇಲ್ ಪಡೆದಿರುವ ಕಾಂಗ್ರೆಸ್ ಅಧ್ಯಕ್ಷರು ಕೂಡ ಜೈಲಿನಲ್ಲಿ ಇರಬೇಕಾಗಿತ್ತು ಅಂತ ಟಾಂಗ್ ನೀಡಿದರು. ಅಲ್ಲದೇ ಯೂತ್ ಕಾಂಗ್ರೆಸ್ ಅಧ್ಯಕ್ಷರ ಮೇಲೆ ಹತ್ತು ಕೇಸ್ ಗಳಿದ್ದು ಆತನನ್ನು ಕೂಡ ನೀವು ಜೈಲಿಗೆ ಹಾಕಬೇಕು. ಕಾಂಗ್ರೆಸ್ ನವರು ಜೈಲಿನ ಒಳಗಡೆ ಹೋರಾಟ ಮಾಡಬೇಕು ಅಂತ ವ್ಯಂಗ್ಯವಾಡಿದರು. ಕಾಂಗ್ರೆಸ್ ನವರು ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
PublicNext
15/04/2022 11:38 am