ಮಂಗಳೂರು: ಭ್ರಷ್ಟಚಾರಕ್ಕೂ ನಮ್ಮ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಮಂಗಳೂರಿನಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿರುವ ಸಂತೋಷ್ ಆತ್ಮಹತ್ಯೆಗೆ ಶರಣಾದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಕೋಟ ಶ್ರೀನಿವಾಸ ಪೂಜಾರಿ ಅವರು, ಅಧಿಕಾರದಲ್ಲಿದ್ದಾಗ ಕೆಲ ಆರೋಪ, ಸವಾಲುಗಳು ಬರುವುದು ಸಾಮಾನ್ಯ. ಈ ರೀತಿಯ ಆರೋಪಕ್ಕೆ ಸಚಿವ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಉತ್ತರ ಕೊಡುವ ಸಾಮರ್ಥ್ಯ ಅವರಿಗಿದೆ. ಸಂತೋಷ್ ಡೆತ್ ನೋಟ್‌ನಲ್ಲಿ ಏನು ಬರೆದಿದ್ದಾರೆ ಎಂಬ ಮಾಹಿತಿಯಿಲ್ಲ ಎಂದರು.
ಹಿಂದೂಯೇತರರಿಗೆ ಮುಜರಾಯಿ ಇಲಾಖೆಗೆ ಒಳಪಟ್ಟ ಅಂಗಡಿ ವ್ಯಾಪಾರಕ್ಕೆ ನೀಡಿದರೆ ಇಒ ಸಸ್ಪೆಂಡ್ ಆದೇಶ ವಿಚಾರವಾಗಿ ಮಾತನಾಡಿದ ಅವರು, ಈ ನಿಯಮಗಳನ್ನು ಹಿಂದಿನ ಸರ್ಕಾರ ಜಾರಿಗೆ ತಂದಿದೆ. ಯಾವುದೇ ತಾರತಮ್ಯವಿಲ್ಲದೆ ಕಾನೂನು ಪಾಲಿಸೋದು ಅನಿವಾರ್ಯವಾಗಿದೆ. ಸಿಎಂ ಈಗಾಗಲೇ ಅದನ್ನು ಸ್ಪಷ್ಟಪಡಿಸಿದ್ದಾರೆ. ಜಾತಿ ಧರ್ಮ ವರ್ಗ ನಡುವೆ ತಾರತಮ್ಯ ಇಲ್ಲದ ಪರಿಸ್ಥಿತಿ ನಿರ್ಮಾಣ ಸರ್ಕಾರದ ಜವಾಬ್ದಾರಿ. ವಿವಾದಗಳು ಜನಜಾಗೃತಿಯ ಭಾಗವೆ ಹೊರತು ಸರ್ಕಾರ ಅದರಲ್ಲಿ ಭಾಗಿಯಿಲ್ಲ ಎಂದು ಹೇಳಿದರು
Kshetra Samachara
13/04/2022 01:50 pm