ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಹಿಂಸೆಗೆ ಇಳಿದರೆ ಸರಕಾರ ಸಹಿಸುವುದಿಲ್ಲ: ಉಡುಪಿಯಲ್ಲಿ ಸಿಎಂ ಎಚ್ಚರಿಕೆ

ಉಡುಪಿ: ಪ್ರಸಕ್ತ ವಿದ್ಯಮಾನಗಳ ಬಗ್ಗೆ ಯಾರು ಏನೇ ವಿಶ್ಲೇಷಣೆ ಮಾಡಲಿ,ನಾವುಸಂವಿಧಾನಬದ್ಧವಾಗಿ ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡುತ್ತೇವೆ.ಕಾನೂನಿನ ಮುಂದೆ ಎಲ್ಲರೂ ಸಮಾನ.ಈ ದೃಷ್ಟಿಕೋನ ಇಟ್ಟುಕೊಂಡು ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸಿಎಂ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸಿಎಂ ,ಅವರವರ ವಿಚಾರ ಪ್ರಚಾರ ಮಾಡಲು ಏನೂ ತೊಂದರೆ ಇಲ್ಲ.ಆದರೆ ಕಾನೂನು ಕೈಗೆ ತೆಗೆದುಕೊಳ್ಳಬಾರದು.ಹಿಂಸೆಗೆ ಇಳಿದರೆ ಸರಕಾರ ಸಹಿಸುವುದಿಲ್ಲ .ಈ ಸ್ಪಷ್ಟ ಸಂದೇಶ ಈಗಾಗಲೇ ಕಳುಹಿಸಿದ್ದೇನೆ ಎಂದರು.

ಹಿಜಾಬ್ ವಿಚಾರದಲ್ಲಿ ಕೋರ್ಟ್ ಆದೇಶ ಇದೆ.ಕೋರ್ಟ್ ಆದೇಶ ಪಾಲನೆ ಆಗುತ್ತದೆ ಎಂದರು.

ಮಂಗಳೂಲ್ಲಿ ಲವ್ ಜಿಹಾದ್ ಗೆ ಹಿಂದೂ ಟಾಸ್ಕ್ ಪೋರ್ಸ್ ರಚನೆಯಾಗುತ್ತಿದೆ ಎಂದು ಸುದ್ದಿಗಾರರು ಗಮನ ಸೆಳೆದಾಗ,ಯಾರ್ಯಾರು ಅವರವರ ರಕ್ಷಣೆ ಮಾಡಿಕೊಳ್ಳಬೇಕೋ ಮಾಡಿಕೊಳ್ಳುತ್ತಾರೆ.ಆದರೆ ಎಲ್ಲದಕ್ಕೂ ಕಾನೂನು ಇದೆ.ಇಷ್ಟೆಲ್ಲಾ ಘಟನೆ ನಡೆದವಲ್ಲ? ಎಲ್ಲದಕ್ಕೂ ಕಾನೂನು ಇದೆ.ಕೆಲವೊಂದು ಕಾನೂನುಗಳನ್ನು ಹಿಂದಿನ ಸರಕಾರವೇ ಮಾಡಿದೆ.ನಾವೇನು ಹೊಸದಾಗಿ ಕಾನೂನು ಮಾಡಿಲ್ಲ.ಹಿಂದಿನ ಸರಕಾರಗಳು ಮಾಡಿದ ಕಾನೂನು ಪ್ರಕಾರವೇ ನಡೆಯುತ್ತಿದೆ ಎಂದು ಹೇಳಿದ್ದಾರೆ.

Edited By : Manjunath H D
PublicNext

PublicNext

11/04/2022 02:21 pm

Cinque Terre

32.54 K

Cinque Terre

17

ಸಂಬಂಧಿತ ಸುದ್ದಿ