ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಹಿಂಸಾತ್ಮಕ ಕೃತ್ಯಗಳಿಗೆ ಸರ್ಕಾರ ಪ್ರಚೋದನೆ ನೀಡುತ್ತಿದೆ: ಯುಟಿ ಖಾದರ್ ಆಕ್ರೋಶ

ಮಂಗಳೂರು:ರಾಜ್ಯದಲ್ಲಿ ಹಿಂಸಾತ್ಮಕ, ಕೋಮು ಪ್ರಚೋದನಾತ್ಮಕ ಘಟನೆಗಳು ನಡಿತಾ ಇದ್ರೂ ಸಿಎಂ ಬಸವರಾಜ ಬೊಮ್ಮಾಯಿ ಮೌನವಾಗಿದ್ದಾರೆ. ಸಿಎಂ ರಾಜ್ಯವನ್ನು ಗೂಂಡಾಗಳ ಕೈಗೆ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ, ವಿಧಾನಸಭೆಯ ವಿಪಕ್ಷ ಉಪನಾಯಕ ಯುಟಿ ಖಾದರ್ ಕಿಡಿಕಾರಿದ್ದಾರೆ.

ಮಂಗಳೂರು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,

ಕರ್ನಾಟಕ ರಾಜ್ಯಕ್ಕೆ ಅದರದ್ದೇ ಆದ ಇತಿಹಾಸ, ಪರಂಪರೆ, ಸಂಸ್ಕೃತಿ ಇದೆ. ವಿಶ್ವದಲ್ಲಿ ಬೆಂಗಳೂರಿಗೆ ಶಾಂತಿಯುತ ನಗರ ಎಂಬ ಹೆಸರು ಕೂಡ ಇದೆ. ಬಿಜೆಪಿ ಸರಕಾರದಿಂದ ರಾಜ್ಯದ ಗೌರವ, ಘನತೆಗೆ ಚ್ಯುತಿ ಉಂಟಾಗಿದೆ ಎಂದು ಕಿಡಿಕಾರಿದ್ರು.

ಧಾರವಾಡದಲ್ಲಿ ಕಲ್ಲಂಗಡಿ ಧ್ವಂಸ ಪ್ರಕರಣವನ್ನು ಎಲ್ಲರೂ ಖಂಡಿಸಿದ್ದಾರೆ. ಅಲ್ಲದೇ ದೇಗುಲದ ಅರ್ಚಕರು ಕೂಡ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ಸಹಿಸಲು ಅಸಾಧ್ಯವಾದ ಘಟನೆ. ಇಂತಹ ಕೃತ್ಯವನ್ನು ಕ್ರೂರಿ ಮನಸ್ಸುಗಳು ಮಾಡುತ್ತಿದ್ದಾರೆ. ಇಂತಹ ಘಟನೆಯನ್ನು 90 ಶೇಕಡಾ ಜನರು ಸರ್ವಧರ್ಮಿಯರು ಒಪ್ಪುವುದಿಲ್ಲ. ಮುಂದೆ ಇಂತಹ ವಿಚಾರಗಳೇ ಸರಕಾರಕ್ಕೆ ತಿರುಗುಬಾಣ ಆಗುತ್ತದೆ ಎಂದು ಭವಿಷ್ಯ ನುಡಿದರು.

ರಾಜ್ಯ ಸರಕಾರಕ್ಕೆ ನಾವೇನು ಜನರಿಗೆ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ ಎಂದು ಹೇಳುವುದು ಅವರಿಗೆ ಆಗ್ತಿಲ್ಲ. ಈ ವಿಚಾರದಲ್ಲಿ ಅವರು ದಿವಾಳಿಯಾಗಿದ್ದಾರೆ ಎಂದು ಕಿಡಿಕಾರಿದರು. ಹೀಗಾಗಿ ಇಂತಹ ಹಿಂಸಾತ್ಮಕ ಕೃತ್ಯಗಳಿಗೆ ಸರ್ಕಾರ ಪ್ರಚೋದನೆ ನೀಡುತ್ತಿದೆ ಎಂದು ಆರೋಪಿಸಿದ ಯುಟಿ ಖಾದರ್, ಇಷ್ಟೆಲ್ಲಾ ಅನಾಹುತ ಆಗ್ತಿದ್ರೂ ಸಿಎಂ ಮೌನವಾಗಿದ್ದಾರೆ.

ಜನರಿಗೆ ಧೈರ್ಯ ತುಂಬದ ಸಿಎಂ, ಜನರಿಗೆ ಆತ್ಮವಿಶ್ವಾಸ ಕೂಡ ಕೊಡುತ್ತಿಲ್ಲ. ಅಲ್ಲದೇ ಇಂತಹ ಹಿಂಸಾತ್ಮಕ ಕೃತ್ಯಗಳನ್ನು ಮಾಡುವವರ ವಿರುದ್ದ ಮಾತನಾಡುತ್ತಿಲ್ಲ ಎಂದು ಕಿಡಿಕಾರಿದರು. ಈ ಮೂಲಕ ಸಿಎಂ ಕರ್ಣನ ರಾಜ್ಯವನ್ನು ಗುಂಡಾಗಳ ಕೈಯಲ್ಲಿ ಕೊಟ್ಟಿದ್ದಾರೆ ಎಂದು ಗುಡುಗಿದರು.‌ ಕೂಡಲೇ ಸಿಎಂ ಮಾತನಾಡಬೇಕು ಎಂದು ಆಗ್ರಹಿಸಿದರು.

Edited By :
Kshetra Samachara

Kshetra Samachara

11/04/2022 01:00 pm

Cinque Terre

7.63 K

Cinque Terre

2

ಸಂಬಂಧಿತ ಸುದ್ದಿ