ಉಡುಪಿ: ಸಿದ್ದರಾಮಯ್ಯರನ್ನು ನಿಮಾನ್ಸ್ ಗೆ ಸೇರಿಸಿ ಎಂದು ಹೇಳಿಕೆ ನೀಡಿದ್ದ ಸಚಿವೆ ಶೋಭಾ ಕರಂದ್ಲಾಜೆಗೆ ಮಾಜಿ ಸಚಿವ ವಿನಯಕುಮಾರ್ ಸೊರಕೆ ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ರಾಷ್ಟ್ರಮಟ್ಟದ ಜಾತ್ಯತೀತ ನಾಯಕರು.ಐದು ವರ್ಷ ಯಶಸ್ವಿಯಾಗಿ ಆಳ್ವಿಕೆ ನೀಡಿದ್ದಾರೆ.13 ಬಜೆಟ್ ಮಂಡಿಸಿರುವ ಏಕೈಕ ನಾಯಕ.
ಇತಿಹಾಸದಲ್ಲಿ ಸಿದ್ದರಾಮಯ್ಯ ನಂತಹ ಕೆಲಸ ಮಾಡಿದ ಸರಕಾರ ಇಲ್ಲ.ಅರಸು, ಬಂಗಾರಪ್ಪನವರ ಹಾದಿಯಲ್ಲಿ ನಡೆದ ಅಪರೂಪದ ನಾಯಕ ಸಿದ್ದರಾಮಯ್ಯ.ಅವರ ಬಾಯಿಮುಚ್ಚಿಸುವ ಕೆಲಸ ಮಾಡುವುದು ಎಷ್ಟರ ಮಟ್ಟಿಗೆ ಸರಿ?
ಸಿಟಿ ರವಿ, ಶೋಭಾ, ಅರಗರಿಗೆ ಸಿದ್ದರಾಮಯ್ಯ ಬಗ್ಗೆ ಮಾತನಾಡಲು ಯಾವ ಯೋಗ್ಯತೆ ಇದೆ?ಮುಖ್ಯಮಂತ್ರಿಗಳು ಯಾಕೆ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ?
ಜನರ ದಾರಿ ತಪ್ಪಿಸಲು ಸಿದ್ದರಾಮಯ್ಯರ ವ್ಯಕ್ತಿತ್ವ ಕ್ಕೆ ಧಕ್ಕೆ ಮಾಡುತ್ತಿದ್ದಾರೆ.ಸಿದ್ದರಾಮಯ್ಯರನ್ನು ನಿಮಾನ್ಸ್ ಗೆ ಸೇರಿಸಬೇಕೆಂದು ಹೇಳುತ್ತಾರೆ .ಈ ಶೋಭಾರನ್ನು ಎಲ್ಲಿಗೆ ಸೇರಿಸಬೇಕು? ಮೊದಲು ಶೋಭಾ ಕರಂದ್ಲಾಜೆಯವರ ಮಂಪರು ಪರೀಕ್ಷೆ ನಡೆಸಿ ಎಂದು ವಾಗ್ದಾಳಿ ನಡೆಸಿದ್ದಾರೆ.
Kshetra Samachara
09/04/2022 02:32 pm