ಉಡುಪಿ: ಅಮಿತ್ ಶಾ ಹೇಳಿರುವುದನ್ನು ಹಿಂದಿ ಹೇರಿಕೆ ಎಂದು ಯಾರೂ ಭಾವಿಸಬಾರದು. ಇಡೀ ದೇಶವನ್ನು ಜೋಡಿಸುವ ಭಾಷೆಯ ಅಗತ್ಯತೆ ಇದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು ,ಪುರಾತನ ಕಾಲದ ವೇದ ಪುರಾಣ ಸಂಸ್ಕೃತ ಭಾಷೆಯಲ್ಲಿದೆ.ಆದರೆ ಕಠಿಣ ಸಂಸ್ಕೃತ ಭಾಷೆ ದೇಶದ ಜನರ ಭಾಷೆಯಾಗಿ ಉಳಿದುಕೊಂಡಿಲ್ಲ. ಸಂಸದೆಯಾದ ನಂತರ ನನಗೆ ಇಡೀ ದೇಶವನ್ನು ಜೋಡಿಸುವುದು ಭಾಷೆ ಎಂಬುದು ಸ್ವಂತ ಅನುಭವಕ್ಕೆ ಬಂದಿದೆ.ಸ್ಥಳೀಯ ಮತ್ತು ಪ್ರಾಂತೀಯ ಭಾಷೆ ನಮಗೆ ಬೇಕೇ ಬೇಕು. ಹಾಗಾಗಿ ಹೊಸ ಶಿಕ್ಷಣ ನೀತಿಯಲ್ಲಿ ಇದಕ್ಕೆ ಕೇಂದ್ರ ಸರ್ಕಾರ ಒತ್ತುಕೊಟ್ಟಿದೆ ಎಂದು ಹೇಳಿದ್ದಾರೆ.
ಭಾರತ ದೇಶವನ್ನು ಜೋಡಣೆ ಮಾಡಲು ಹಿಂದಿ ಆಗಬಹುದು ಎಂದು ಯೋಚನೆ ಮಾಡಬೇಕು.
ಯಾವುದೇ ಭಾಷೆಯನ್ನು ಯಾರು ಕಲಿತರೂ ನಷ್ಟ ಇಲ್ಲ. ಹಿಂದಿ ಮರಾಠಿ ತೆಲುಗು ತಮಿಳು ಮಲಯಾಳಂ ಕಲಿತರೂ ಲಾಭ ಇದೆ.
ಹೀಗಾಗಿ ಇಡೀ ದೇಶ ಅಮಿತ್ ಶಾ ಹೇಳಿದ ಬಗ್ಗೆ ಯೋಚನೆ ಮಾಡಬೇಕು. ಇಡೀ ದೇಶವನ್ನು ಒಗ್ಗೂಡಿಸಲು ಹಿಂದಿ ಭಾಷೆ ಎಂದು ಆಲೋಚನೆ ಇದೆ. ಭಾಷೆಯ ಕಾರಣದಿಂದ ಕೇಂದ್ರ ಸರ್ಕಾರದ ಕೆಲ ನಿರ್ಧಾರಗಳು ಜನಕ್ಕೆ ತಲುಪುತ್ತಿಲ್ಲ ಎಂದು ಹೇಳಿದ್ದಾರೆ.
PublicNext
08/04/2022 09:53 pm